ಮೈಸೂರು ದಸರಾ ಸೇರಿ ಬೇರೆ ಬೇರೆ ಉತ್ಸವಗಳಿಗೆ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಒಂದು ರೂಪಾಯಿ ಹಣ ನೀಡುವುದಿಲ್ಲ, ರಾಜ್ಯ ಸರ್ಕಾರದ ಈ ಮಲತಾಯಿ ದೊರಣೆಯು ಕನ್ನಡ ಪರ ಸಂಘಟನೆಗಳು ಆಕ್ರೋಶ ಕಾರಣವಾಗಿದೆ.
ಸರಕಾರದ ಬಿಡಿಗಾಸು ಅನುದಾನವಿಲ್ಲದೇ 12 ಗಂಟೆಗಳ ಕಾಲ ಅದ್ಧೂರಿಯಿಂದ ವೈಭವದಿಂದ ನಡೆಯುವ ಏಕೈಕ ರಾಜ್ಯೋತ್ಸವ ಮೆರವಣಿಗೆಯೆಂದರೆ ಬೆಳಗಾವಿ ಮೆರವಣಿಗೆ! ರಾಜ್ಯ ಸರ್ಕಾರ ಮೈಸೂರು ದಸರಾ ಹಬ್ಬಕ್ಕೆ ಹತ್ತು ಕೋಟಿ ಅನುದಾನ ನೀಡುತ್ತದೆ.
ವಿಧಾನ ಸೌಧದ ಸಮೀಪವಿರುವ ಕನ್ನಡ ಸಂಘಟನೆಗಳಿಗೆ ಕೋಟ್ಯಾವಧಿ ಹಣ ಕೊಡುತ್ತದೆ.ಬೆಳಗಾವಿಯ 75 ಕ್ಕೂ ಅಧಿಕ ಕನ್ನಡ ಸಂಘಟನೆಗಳಿಗೆ ಬೆಳಗಾವಿಯಲ್ಲಿ ನವ್ಹೆಂಬರ್ ತಿಂಗಳಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲುಒಂದು ಕೋಟಿ ರೂ.ಅನುದಾನ ನೀಡಲುಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು.
ನವ್ಹೆಂಬರ್ ಒಂದರ ಮೆರವಣಿಗೆಯಲ್ಲಿ ಈ ಬಾರಿ ನಾಲ್ಕು ಲಕ್ಷ ಮೀರಿದ ಜನಸಾಗರವೇ ಸೇರಿತ್ತು ಇದೊಂದು ಐತಿಹಾಸಿಕ ದಾಖಲೆ. ಮೆರವಣಿಗೆಯ ಮಾರ್ಗ ಹೊರತುಪಡಿಸಿ ಬೆಳಗಾವಿಯ ಇನ್ನುಳಿದ ಪ್ರಮುಖ ರಸ್ತೆಗಳು,ವೃತ್ತಗಳು ಸಹಸ್ರಾರು ಯುವಕರಿಂದ ತುಂಬಿ ತುಳುಕುತ್ತಿದ್ದವು. ಕೈಯಲ್ಲಿ ಕನ್ನಡ ಧ್ವಜಗಳನ್ನು ಹಿಡಿದು ರಾತ್ರಿ ಹತ್ತು ಗಂಟೆಯವರೆಗೂ ಯುವಕರು ತಂಡೋಪತಂಡವಾಗಿ ಸುತ್ತಿದರು. ಕೊನೆಗೆ ಪೋಲೀಸರು ಚೆನ್ನಮ್ಮ ವೃತ್ತದಲ್ಲಿ ಲಘು ಲಾಠಿ ಪ್ರಹಾರ ಮಾಡಿದ ನಂತರವೇ ಮೆರವಣಿಗೆ ಕಾವು ಆರತೊಡಗಿತು.
ಶಿವಜಯಂತಿ,ಗಣೇಶ ವಿಸರ್ಜನೆ ಮೆರವಣಿಗೆಗಳಿಗೆ ಬೆಳಗಿನ ಜಾವದ ವರೆಗೆ ಅವಕಾಶ ನೀಡುವ ಪೋಲೀಸರು ರಾಜ್ಯೋತ್ಸವ ಮೆರವಣಿಗೆಯನ್ನು ಮೊಟಕುಗೊಳಿಸಲು ಪ್ರಯತ್ನಿಸಿದ್ದಕ್ಕೆ ಸಾಕಷ್ಟು ಅಸಮಾಧಾನ ವ್ಯಕ್ತವಾಯಿತು.
ಸರಕಾರದ ಅನುದಾನವಿಲ್ಲದೇ ಕನ್ನಡ ಸಂಘಟನೆಗಳು ಇಷ್ಟೊಂದು ಅದ್ಧೂರಿಯಿಂದ ರಾಜ್ಯೋತ್ಸವ ಆಚರಿಸುತ್ತಲೇ ಬಂದಿವೆ. ಈ ಅಭಿಮಾನ ಎಂದೆಂದಿಗೂ ಶಾಶ್ವತವಾಗಿರಲಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


