ಮಂಡ್ಯ: ಅರ್ಚಕ ಹಾಗೂ ಆತನ ಮಕ್ಕಳು ಹಾಗೂ ದೇವಾಲಯದ ಕಾವಲುಗಾರ ದೇವಾಲಯಕ್ಕೆ ಸೇರಿದ ಲಕ್ಷಾಂತರ ರೂಪಾಯಿಗಳನ್ನು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಬಯಲು ಸೀಮೇಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ದವಾಗಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಶ್ರೀ ಕ್ಷೇತ್ರ ಸಾಸಲು ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಸೋಮೇಶ್ವರ ಮತ್ತು ಶ್ರೀ ಶಂಭುಲಿಂಗೇಶ್ವರ ದೇವಾಯಲ್ಲಿ ಪ್ರತಿ ವರ್ಷವು ಕೋಟ್ಯಾಂತರ ರೂಪಾಯಿಗಳು ಆದಾಯ ಬರುವ ದೇವಾಯವಾಗಿದೆ. ಇದನ್ನು ದುರುಪಯೋಗ ಮಾಡಿಕೊಂಡು ರಾತ್ರಿ ವೇಳೆಯಲ್ಲಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ದೋಚುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೇವಾಯದ ಕಾವಲುಗಾರ ವೀರಪ್ಪ, ಅರ್ಚಕರಾದ ಸೋಮೇಶ ಮತ್ತು ಆತನ ಮಕ್ಕಳಾದ ಸಂತೋಷ್ ಆರಾದ್ಯ, ಉಮಾಶಂಕರ್ ಆರಾದ್ಯ, ಮತ್ತು ಸಚ್ಚಿನ್ ಜಂಗಮ್, ಪುಟ್ಟರಾಜು ಇವರುಗಳು ದೇವಾಯದ ಹುಂಡಿಯಲ್ಲಿ ಸಂಗ್ರಹವಾಗುವ ಕಾಣಿಕೆ ಹಣವನ್ನು ಯಾರಿಗೂ ತಿಳಿಯದಂತೆ ಹುಂಡಿಯ ಬಾಯಿಯನ್ನು ಅಗಲಿಸಿ ದಿನನಿತ್ಯ ಲಕ್ಷಾಂತರ ರೂಪಾಯಿಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ ದೇವಾಲಯದ ಅರ್ಚಕರಾದ ಸೋಮೇಶ ಆರಾದ್ಯ, ಆತನ ಮಕ್ಕಳಾದ ಸಂತೋಷ್ ಆರಾದ್ಯ, ಉಮಾಶಂಕರ್ ಆರಾದ್ಯ ಎಂಬುವವರು ನಾನು ಭಕ್ತಾದಿಗಳ ಅನುಕೂಲಕ್ಕಾಗಿ ಗ್ರಾಮದಲ್ಲಿ ಯಾತ್ರ ನಿವಾಸ ಮಾಡುವುದಾಗಿ ಭಕ್ತಾದಿಗಳ ಬಳಿಯಿಂದ ಹಣ, ಸಿಮೆಂಟ್, ಕಬ್ಬಿಣ, ಮರಳು ಸಂಗ್ರಹಿಸಿ ಮೂರು ಕೋಟಿ ವೆಚ್ಚದಲ್ಲಿ ತಮ್ಮ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದು, ಇದರ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿಸಿರುತ್ತಾರೆ.
ಸದ್ಯ ಕಾಣಿಕೆ ಹುಂಡಿಯಲ್ಲಿ ಇದ್ದ ಹಣ ಕಳ್ಳತವಾಗುತ್ತಿದೆ ಎಂದು ಗ್ರಾಮ ಲೆಕ್ಕಾದಿಕಾರಿಗಳಾದ ಪ್ರಸನ್ನರವರು ಪತ್ತೆ ಹಚ್ಚಿದ್ದು, ಇವರ ಈ ಕಾರ್ಯಕ್ಕೆ ಭಕ್ತಾದಿಗಳಿಂದ ಹಾಗೂ ಗ್ರಾಮಸ್ಥರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವಿಷಯ ತಿಳಿದ ಕೂಡಲೇ ಕೃಷ್ಣರಾಜಪೇಟೆ ತಹಸೀಲ್ದಾರ್ ರೂಪಾ, ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್ ಸ್ಥಳಕ್ಕೆ ಭೇಟಿ ನೀಡಿ, ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಕಳ್ಳತನ ಆರೋಪ ಹೊತ್ತಿರುವ ಐವರನ್ನು ಅರ್ಚಕ, ಕಾವಲುಗಾರರನ್ನು ವೃತ್ತಿಯಿಂದ ತಾತ್ಕಾಲಿಕವಾಗಿ ವಜಾ ಮಾಡಲಾಗಿದೆ.
ವರದಿ: ಶ್ರೀನಿವಾಸ್, ಮಂಡ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


