ಹೆಚ್.ಡಿ.ಕೋಟೆ: ತಾಲೂಕಿನ ಕ್ರೀಷ್ಣಾಪುರ ಗ್ರಾಮದ ಸರಕಾರಿ ಶಾಲ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಮಲ್ಲಿಗೆ ಜ್ಞಾನ ವಿಕಾಸಕೇಂದ್ರದಲ್ಲಿ ಸಿರಿಧಾನ್ಯಗಳ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸಿದ್ದಾರ್ಥ ಕಾಲೇಜೀನ ಉಪನ್ಯಾಸಕರಾದ ಪುಷ್ಪಲತಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಶಶಿಧರ್ ಎಂ. ರವರು ದೀಪ ಬೇಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜ್ಞಾನವಿಕಾಸ ಕಾರ್ಯಕ್ರಮವು ಹೇಮಾವತಿ ಅಮ್ಮನವರ ಪ್ರೀತಿಯ ಕಾರ್ಯಕ್ರಮ ಜ್ಞಾನವಿಕಾಸ ಕೇoದ್ರದಡಿಯಲ್ಲಿ ಪ್ರತಿ ತಿoಗಳು ಸಹ ಆರೋಗ್ಯ ಶಿಕ್ಷಣ ಮತ್ತು ಕುಟುಂಬ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ, ನಿಮ್ಮಲ್ಲರಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಧೈರ್ಯ ತುoಬುವ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು
ಪುಷ್ಪಲತಾರವರು ಮಾತನಾಡಿ, ಸಿರಿಧಾನ್ಯಗಳ ಕುರಿತು ಮಾಹಿತಿ ನೀಡಿದರು. ಸಿರಿಧಾನ್ಯಗಳನ್ನು ಬಳಕೆ ಮಾಡುವುದರಿoದ ರಕ್ತ ಶುದ್ದಿ ಹಾಗೂ ಜೀರ್ಣಕ್ರಿಯೆಗೆ ಮತ್ತು ಕೊಬ್ಬು ನಿವಾರಣೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಹೆಚ್.ಜಿ. ಸೇವಾಪ್ರತಿ ನಿಧಿ ಮಂಗಳ ಮತ್ತು ಕೇಂದ್ರದ ಸದಸ್ಯರು ಮಂಜುಳ ನಾಗಮ್ಮ ಚಲುವಮ್ಮ, ಸುನಂದ, ರಾಜೇಶ್ವರಿ ಹಾಗೂ ಕೇoದ್ರದ ಎಲ್ಲ ಸದಸ್ಯರು ಭಾಗವಹಿಸಿದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


