ಬಾಹುಬಲಿ 2 ಬಾಕ್ಸ್ ಆಫೀಸ್ ಗಳಿಕೆ ದಾಖಲೆಯನ್ನು ಕನ್ನಡದ ಕಾಂತಾರ ಸಿನೆಮಾ ಸರಿಗಟ್ಟಿದೆ. ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನೆಮಾ ಪ್ರದರ್ಶನದ ಐದನೇ ವಾರದಲ್ಲಿ 40 ಕೋಟಿ ರೂ. ಗಳಿಸಿತ್ತು. ರಿಷಬ್ ಶೆಟ್ಟಿ ಅವರ ಕಾಂತಾರ ಐದನೇ ವಾರದ ಪ್ರದರ್ಶನದಲ್ಲಿ 65 ಕೋಟಿ ರೂ. ಗಳಿಸಿದೆ.
ಅಂದ ಹಾಗೆ ಹಿಂದಿ ಸೇರಿದಂತೆ ದೇಶದ ಇತರ ಪ್ರಾದೇಶಿಕ ಭಾಷೆಗಳಲ್ಲಿ ಸಿನೆಮಾ ಡಬ್ ಮಾಡಲಾಗಿದ್ದು, ಪ್ರಪಂಚದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.
ಕಾಂತಾರ ಸಿನಿಮಾದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಾಯಕ ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರ ತಂಡ ದಿಲ್ಲಿಯ ಇಂಡಿಯಾ ಗೇಟ್‌ಗೆ ಶನಿವಾರ ಭೇಟಿ ನೀಡಿ, ತಮ್ಮ ಸಿನೆಮಾ ಪ್ರಮೋಷನ್ ಕೈಗೊಂಡಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz