ತಿರುಪತಿ ತಿರುಮಲ ಟ್ರಸ್ಟ್ ಒಟ್ಟಾರೆ ಆಸ್ತಿ 2.50 ಲಕ್ಷ ಕೋಟಿ ರೂ. ಆಗಿದ್ದು,.ದೇಶದ ಅತ್ಯಂತ ದೊಡ್ಡ ಕಂಪನಿಗಳಾದ ವಿಪ್ರೊ ಮತ್ತು ನೆಸ್ಟ್ಲೆಗಿಂತ ಶ್ರೀಮಂತ ಸಂಸ್ಥೆ ಆಗಿದೆ.
ತಿರುಪತಿ ತಿಮ್ಮಪ್ಪನ ಆಸ್ತಿ 10 ಟನ್ ಗೂ ಅಧಿಕ ಚಿನ್ನ ಹಾಗೂ 15,900 ಕೋಟಿ ರೂ.ಗೂ ಅಧಿಕ ನಗದು ಇದೆ. ಒಟ್ಟಾರೆ ಆಸ್ತಿ ಮೌಲ್ಯ 2.5 ಲಕ್ಷ ಕೋಟಿ ರೂ. ಆಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಶ್ವೇತಪತ್ರದ ಮೂಲಕ ಆಸ್ತಿ ಘೋಷಣೆ ಮಾಡಿಕೊಂಡಿದೆ.
ಬೆಂಗಳೂರು ಮೂಲದ ವಿಪ್ರೊ ಕಂಪನಿಯ ಆಸ್ತಿ ಮೌಲ್ಯ 2.14 ಲಕ್ಷ ಕೋಟಿ ರೂ. ಆಗಿದ್ದರೆ, ಅಲ್ಟ್ರಾ ಟೆಕ್ ಸೀಮೆಂಟ್ ಕಂಪನಿಯ ಆಸ್ತಿ 1.99 ಲಕ್ಷ ಕೋಟಿ ರೂ. ಆಗಿದೆ. ಸ್ವಿಜರ್ ಲೆಂಡ್ ಮೂಲದ ಆಹಾರ ಮತ್ತು ತಂಪುಪಾನೀಯ ಕಂಪನಿ ಭಾರತದಲ್ಲಿ ಶಾಖೆ ಹೊಂದಿದ್ದು, ಇದರ ಆಸ್ತಿ ಮೌಲ್ಯ 1.96 ಕೋಟಿ ರೂ. ಆಗಿದ್ದು, ಈ ಕಂಪನಿಗಳನ್ನು ಮೀರಿದ ಆಸ್ತಿ ತಿರುಪತಿ ತಿರುಮಲ ಟ್ರಸ್ಟ್ ಹೊಂದಿದೆ.
2019ರ ಮಾರ್ಗಸೂಚಿ ಅನ್ವಯ ಟಿಟಿಡಿ ಹೂಡಿಕೆ ಮಾಡಿರುವ ಬಂಡವಾಳ ಸೇರಿದಂತೆ ಒಟ್ಟಾರೆ ಆಸ್ತಿಯನ್ನು ಘೋಷಣೆ ಮಾಡಿದ್ದು, ವಿವಿಧ ರಾಷ್ಟ್ರೀಕೃ ಬ್ಯಾಂಕ್ ಗಳಲ್ಲಿ ಟ್ರಸ್ಟ್ ಠೇವಣಿ ರೂಪದಲ್ಲಿ 10.3 ಟನ್ ಚಿನ್ನ ಇರಿಸಿದೆ. ಇದರ ಮೌಲ್ಯ 5300 ಕೋಟಿ ರೂ. ಆಗಿದೆ. ನಗದು ರೂಪದಲ್ಲಿ 15,900 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಟಿಟಿಡಿ ಒಟ್ಟಾರೆ2.26 ಲಕ್ಷ ಕೋಟಿ ರೂ. ಆಸ್ತಿ ಹೊಂದಿದ್ದು, 2019ರಲ್ಲಿ 13,025 ಕೋಟಿ ರೂ. ನಗದು ಠೇವಣಿ ಇರಿಸಿದ್ದು, ಮೂರು ವರ್ಷಗಳಲ್ಲಿ ಸುಮಾರು 2000 ಕೋಟಿ ರೂ. ಹೆಚ್ಚು ಠೇವಣಿ ಹೆಚ್ಚಿಸಿಕೊಂಡಿದೆ.
2019ರಲ್ಲಿ 7339 ಟನ್ ಚಿನ್ನ ಠೇವಣಿ ಇರಿಸಲಾಗಿದ್ದು, ಇದೀಗ 10.3 ಟನ್ ಗೆ ಏರಿಕೆಯಾಗಿದೆ. ಇದರಿಂದ ಸುಮಾರು 2.5 ಟನ್ ಹೆಚ್ಚಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


