ಚೆನ್ನೈ-ಬೆಂಗಳೂರು- ಮೈಸೂರು ನಡುವೆ ಇದೇ ವಾರ ಸಂಚಾರ ಆರಂಭಿಸಲಿರುವ ವಂದೇ ಭಾರತ್ ರೈಲು ಸೋಮವಾರ ಪ್ರಾಯೋಗಿಕ ಸಂಚಾರ ಆರಂಭಿಸಿದೆ.
ಚೆನ್ನೈನ ಎಂಜಿಆರ್ ರೈಲು ನಿಲ್ದಾಣದಿಂದ ಸೋಮವಾರ ಮುಂಜಾನೆ 5.50ಕ್ಕೆ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿತು.
ಚೆನ್ನೈ ಮತ್ತು ಮೈಸೂರು ನಡುವಿನ 483 ಕಿ.ಮೀ. ದೂರದ ರೈಲು ಸಂಚಾರ ನವೆಂಬರ್ 11ರಂದು ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ವಂದೇ ಭಾರತ್ ಮತ್ತು ವಂದೇ ಮಾತರಂ ರೈಲು ಶೀಘ್ರದಲ್ಲೇ 25 ಹೊಸ ರೈಲುಗಳು ಸಂಚಾರ ಆರಂಭಿಸಲಿದ್ದು, ಮೊದಲ ರೈಲು ಮೈಸೂರು-ಚೆನ್ನೈ ನಡುವೆ ಸಂಚರಿಸಲಿವೆ. ಇದು ದಕ್ಷಿಣ ಭಾರತದಕ್ಕೆ ಒಲಿದ ಅತ್ಯಂತ ಕಡಿಮೆ ವೇಗದ ರೈಲು ಎಂದು ಹೇಳಲಾಗಿದೆ. ಇದರ ವೇಗ 120 ಕಿ.ಮೀ.ನಿಂದ ಗರಿಷ್ಠ 160 ಕಿ.ಮೀ. ಎಂದು ಹೇಳಲಾಗಿದೆ. ವಂದೇ ಮಾತರಂ ರೈಲುಗಳು ಗರಿಷ್ಠ 180 ಕಿ.ಮೀ. ವೇಗವಾಗಿ ಸಂಚರಿಸಲಿವೆ.
ಈಗಾಗಲೇ ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅತ್ಯಾಧುನಿಕ ಸುರಕ್ಷತಾ ವೈಶಿಷ್ಯತೆಗಳನ್ನು ಹೊಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


