ರಾಜಧಾನಿ ದೆಹಲಿಯಲ್ಲಿ ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿಗೆ ಪ್ರಬಲ ಭೂಕಂಪನ ಸಂಭವಿಸಿದೆ.ದೆಹಲಿಯಲ್ಲಿ ಭೂಮಿ ನಡುಗಿದರೆ ನೆರೆಯ ನೇಪಾಳ ದೇಶದಲ್ಲಿ ಭೂಕಂಪನ ಕೇಂದ್ರ ಬಿಂದು ಕಂಡು ಬಂದಿದ್ದು, ರಿಕ್ಡರ್ ಮಾಪಕದಲ್ಲಿ 6.3ರಷ್ಡು ತೀವ್ರತೆ ದಾಖಲಾಗಿದೆ.
ದೆಹಲಿಯಲ್ಲಿ ನಡುರಾತ್ರಿ ಭೂಕಂಪನ ಸಂಭವಿಸಿದ್ದರಿಂದ ಮನೆಯಿಂದ ಜನರು ಹೊರಗೆ ಓಡಿ ಬಂದಿದ್ದಾರೆ. ಇನ್ನೂ ಕೆಲವರು ನಿದ್ದೆಯಲ್ಲಿ ಇದ್ದಿದ್ದರಿಂದ ಅರಿವಿಗೆ ಬಂದಿಲ್ಲ.
ದೆಹಲಿ, ನೋಯ್ಡಾ ಹಾಗೂ ಗುರ್ ಗಾಂವ್ ನಲ್ಲಿ ಸುಮಾರು 10 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ.
ನೇಪಾಳದ ಸೈಸಿಮೊಗ್ಲಿ ಎಂಬ ಪಟ್ಟಣದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದ್ದು, ಯಾವುದೇ ಸಾವು ನೋವು ವರದಿಯಾಗಿಲ್ಲ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


