ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ತಂದೆ ನಂತರ 44 ವರ್ಷಗಳ ನಂತರ ಸಿಜೆಎ ಹುದ್ದೆ ಅಲಂಕರಿಸಿದ ಮಗ ಎಂಬ ಗೌರವಕ್ಕೆ ಪಾತ್ರರಾದರು.
ಡಿವೈ ಚಂದ್ರಚೂಡ್ ಮುಖ್ಯ ನ್ಯಾಯಮೂರ್ತಿಯಾಗಿ 2 ವರ್ಷಗಳ ಕಾಲ ಅಂದರೆ ನವೆಂಬರ್ 10, 2024ರವರೆಗೆ ಕಾರ್ಯ ನಿರ್ವಹಿಸಲಿದ್ಧಾರೆ.
ರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಡಿವೈ ಚಂದ್ರಚೂಡ್ ಸುಪ್ರೀಂಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಅವರ 74 ದಿನಗಳ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಜಾಗವನ್ನು ಚಂದ್ರಚೂಡ್ ಭರ್ತಿ ಮಾಡಿದರು.
ವೈವೈ ಚಂದ್ರಚೂಡ್ ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ 7 ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ತಂದೆ ನಂತರ ಡಿವೈ ಚಂದ್ರಚೂಡ್ 44 ವರ್ಷಗಳ ನಂತರ ಈ ಹುದ್ದೆ ಅಲಂಕರಿಸಿದ್ದಾರೆ.
ಡಿವೈ ಚಂದ್ರಚೂಡ್ ಇದಕ್ಕೂ ಮುನ್ನ ಹಲವಾರು ಮಹತ್ವದ ತೀರ್ಪುಗನ್ನು ಪ್ರಕಟಿಸಿದ ವಿವಿಧ ಪೀಠಗಳಲ್ಲಿ ಇದ್ದರು. ಅದರಲ್ಲೂ ಐಪಿಸಿ 370 ಸೆಕ್ಷನ್ ರದ್ದು, ಸಮಾನ ಲಿಂಗಿಗಳ ಮದುವೆ, ಅವಿವಾಹಿತ ಮಹಿಳೆಯ ಮಗು ಪಡೆಯುವ ಹಕ್ಕು. ಆಧಾರ್ ಯೋಜನೆಗಳು, ಶಬರಿಮಲೆ ವಿವಾದ ಸೇರಿದಂತೆ ಹಲವು ತೀರ್ಪುಗಳು ಪ್ರಕಟಗೊಂಡಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


