ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅವರ ಕಾರು ಚಾಲಕನ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾರಾ ಅವರ ಕಾರು ಚಾಲಕ ಅಕ್ಷಯ್ ವಿರುದ್ಧ ಅಜಾಗರೂಕ ಚಾಲನೆ ಎಂದು ದೂರು ದಾಖಲಿಸಲಾಗಿದೆ.
ಅಕ್ಟೋಬರ್ 29ರಂದು ನಟಿ ತಾರಾ ಬೆಂಗಳೂರಿನ ಕತ್ರಿಗುಪ್ಪೆ ಹತ್ತಿರ ಕಾರಿನಲ್ಲಿ ತೆರಳುತ್ತಿದ್ದಾಗ ಚಾಲಕ ಅಕ್ಷಯ್ ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿದ್ದಾರೆ.
ಮುಂದೆ ಇದ್ದ ಕಾರು ಜಖಂಗೊಂದಿತ್ತು, ಅಕ್ಷಯ್ ಅವರ ಅಜಾಗರೂಕ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎಂದು ಮುಂದಿನ ಕಾರಿನಲ್ಲಿದ್ದ ಗಿರೀಶ್ ಅವರು ಆರೋಪಿಸಿದ್ದರು.
ಘಟನಾ ನಂತರ ಕಾರು ರಿಪೇರಿ ಮಾಡಿಸುವುದಾಗಿ ಅಕ್ಷಯ್ ಭರವಸೆ ನೀಡಿದ್ದರು. ಆದರೆ ರಿಪೇರಿ ಮಾಡಿಸದೇ ನಂತರ ಸಾಕಷ್ಟು ಬಾರಿ ಅಲೆದಾಡಿಸಿದ್ದಾರೆ ಎಂದು ಮತ್ತೊಂದು ಕಾರಿನ ಗಿರೀಶ್ ದೂರು ನೀಡಿದ್ದಾರೆ.
ಬನಶಂಕರಿ ಪೊಲೀಸ್ ಠಾಣೆಯಲ್ಲಿ ‘ಅಜಾಗರೂಕ ಚಾಲನೆ’ ಎಂದು ಪ್ರಕರಣ ದಾಖಲಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


