ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಬಾವಿ ಗ್ರಾಮಸ್ಥರ ಹಾಗೂ ಭಕ್ತಾದಿಗಳ ಬಹುದಿನದ ಬೇಡಿಕೆಯಾಗಿದ್ದ ನೂತನ ಬಸ್ ನಿಲ್ದಾಣದ ಕಾಮಗಾರಿಗಳಿಗೆ 50 ಲಕ್ಷ ರೂ. ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು, ನೂತನ ಬಸ್ ನಿಲ್ದಾಣದ ಕಾಮಗಾರಿಗಳಿಗೆ ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ಅವರು ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಗೆ ತೆರಳಿ ದೇವಿಯ ದರ್ಶನ ಆಶೀರ್ವಾದ ಪಡೆದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಸವರಾಜ ಮ್ಯಾಗೋಟಿ, ಮಹೇಶ ಸುಗ್ಗೆಣ್ಣವರ, ಮಂಜುನಾಥ, ಮಲ್ಲೇಶ, ಉದಯ ಕೆಸರೂರು, ಬಾಳೇಶಿ, ಶೇಖರ ಹೊಸೂರಿ, ಬಸನಗೌಡ ಪಾಟೀಲ, ದೇವಣ್ಣ ಬಂಗೆಣ್ಣವರ, ಸಂತೋಷ, ಫಕೀರ್ ಕೋಲಕಾರ, ಶೇಖರ ಶಿಣಗಿ, ವಿಠ್ಠಲ ಬಂಡಿಗಿಣಿ, ಇಸ್ಮಾಯಿಲ್ ತಿಗಡಿ, ಕಲ್ಲಪ್ಪ ಕಾಮಕರ, ಸಂಭಾಜಿ ಯಮ್ಮಜಿ, ವಿಠ್ಠಲ ಮಂಡು, ನಾಗಯ್ಯ ಕುಡಚಿಮಠ, ನಾಗಯ್ಯ ಹಂಪಿಹೊಳಿ, ಮಂಜುನಾಥ ಪಟಲಿ, ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು, ಎನ್.ಪಿ. ತಿಮ್ಮಾರೆಡ್ಡಿ, ದಿನೇಶ್, ಮಂಜುನಾಥ, ಸುಳೇಬಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದ್ಯಸರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


