ಬೆಂಗಳೂರು : ಶಾಲೆಗಳಲ್ಲಿ ಹಿಜಾಬ್, ಪಠ್ಯ ಪರಿಷ್ಕರಣೆ ವಿವಾದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಶುರುವಾಗಿದ್ದು, ರಾಜ್ಯಾದ್ಯಂತ 7 ಸಾವಿರಕ್ಕೂ ಹೆಚ್ಚು ವಿವೇಕ ಶಾಲೆಗಳಿಗೆ ಕೇಸರಿ ಬಣ್ಣ ಬಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಶಿಕ್ಷಣ ಇಲಾಖೆ ಹೊಸದಾಗಿ 7000ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ನೆನಪಿನಲ್ಲಿ ವಿವೇಕ ಶಾಲೆ ಎಂದು ಹೆಸರಿಡಲು ಮುಂದಾಗಿದ್ದು, ಈ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಸಲು ಚಿಂತನೆ ನಡೆಸಿದೆ. ಇಲಾಖೆಯ ಈ ನಡೆ ಮುಸ್ಲಿಂ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ.
ಶಿಕ್ಷಣ ಇಲಾಖೆ ವಿವೇಕಾನಂದರ ಹೆಸರನ್ನ ಉಪಯೋಗಿಸಿಕೊಂಡು ಶಾಲೆಗಳನ್ನ ಕೇಸರಿಮಯ ಮಾಡಲು ಮುಂದಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯ ನಂತರ ಎರಡನೇ ಸುತ್ತಿನ ಕೇಸರೀಕರಣ ಶುರು ಮಾಡಿದೆ ಎಂದು ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


