ಹೆ.ದೇ.ಕೋಟೆ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಿರ್ಸಾ ಮುಂಡ ಬುಡಕಟ್ಟು ಸಮಾಜಗಳ ಅಭಿವೃದ್ಧಿ ಮತ್ತು ಸೇವಾ ಒಕ್ಕೂಟ ಮತ್ತು ಶೋಟೋಕಾನ್ ಕರಾಟೆ ಮತ್ತು ಮಾರ್ಟಿಯಲ್ ಆರ್ಟ್ ಅಕಾಡೆಮಿ ವತಿಯಿಂದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ ನಡೆಯಿತು.
ಈ ಪಂದ್ಯಾವಳಿಯಲ್ಲಿ ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ಸುಮಾರು 500 ನೂರಕ್ಕು ಹೆಚ್ಚು ಕರಾಟೆ ಪಟುಗಳು ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಿದರು.
ಈ ಪಂದ್ಯಾವಳಿಯ ವೇದಿಕೆಯಲ್ಲಿ ಜಿ.ಎನ್. ದೇವದತ್ತ, ಜಯಪ್ರಕಾಶ್, ಬೆಟ್ಟಸ್ವಾಮಿ, ಮಹೇಂದ್ರ, ಎಡತೊರೆ ಮಹೇಶ್, ವೆಂಕಟೇಶ, ಕರಾಟೆ ಮಾಸ್ಟರ್ ಗಳಾದ ಸೇನ್ ಸೈ ಅಬ್ದುಲ್, ಮಹಮೊದ್, ಚಂದ್ರನ್, ಮನೋಜ್, ರಾಯಪ್ಪ, ಸಂದೇಶ ಮುಂತಾದವರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


