ಹೆಚ್.ಡಿ.ಕೋಟೆ: ಪುರಸಭೆ ಕಾರ್ಯಲಯದಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರಿಗೆ ಕೋಕ್ ಕೊಡುವುದಾಗಿ ನೂತನ ಸ್ಥಾಯಿಸಮಿತಿ ಅಧ್ಯಕ್ಷ ಐಡಿಯ ವೆಂಕಟೇಶ್ ಭರವಸೆ ನೀಡಿದರು.
ಹೆಚ್.ಡಿ.ಕೋಟೆ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಹಗಲು ದಂಧೆ ನಡೆಯುತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಕೂಗಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು, ಪುರಸಭೆ ಕಾರ್ಯಾಲಯದಲ್ಲಿ ಸರ್ಕಾರದ ಆದೇಶವಿಲ್ಲದೇ, ಕೆಲವು ವ್ಯಕ್ತಿಗಳು ಅಧಿಕಾರಿಗಳ ಕುಮ್ಮಕ್ಕಿನಿಂದ ಸರ್ಕಾರಿ ಕಡತಗಳನ್ನು ತೆಗೆದುಕೊಂಡು ತಮ್ಮ ಮನಬಂದಂತೆ ವರ್ತಿಸುತ್ತಿದ್ದು, ಅಂತಹ ವ್ಯಕ್ತಿಗಳ ಮೇಲೆ ಶಿಸ್ತುಕ್ರಮ ಜರಗಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಕಾರ್ಯಾಲಯದಲ್ಲಿ ಅಧಿಕಾರಿಗಳು ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಹಿಂದೇಟು ಹಾಕಿದ್ದು, ತಾವು ನೇಮಕ ಮಾಡಿಕೊಂಡ ದಳ್ಳಾಳಿಗಳ ಮುಖಾಂತರ ಹೋದರೆ ಮಾತ್ರ ಕೆಲಸ ಕಾರ್ಯಮಾಡಿಕೊಡುವುದು ಇಲ್ಲವಾದರೆ ಸಾರ್ವಜನಿಕ ಕೆಲಸ ಕಾರ್ಯ ಮಾಡದೆ ಅಲೆದಾಡಿಸುತ್ತಿದ್ದಾರೆ. ಸರ್ಕಾರದಿಂದಯಾವುದೇ ಆದೇಶವನ್ನು ಪಡೆಯದೆ ಖಾಸಗಿ ವ್ಯಕ್ತಿಗಳನ್ನು ಅಧಿಕಾರಿಗಳು ನೇಮಕ ಮಾಡಿಕೊಂಡಿರುವುದು ಆನೇಕ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಂತಹ ಸಿಬ್ಬಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ನಮ್ಮ ಆಡಳಿತ ಮಂಡಳಿಯವರಿಗೆ ತಿಳಿಸಿ ಸೂಕ್ತಕ್ರಮ ಜರುಗಿಸುವುದಾಗಿ ವೆಂಕಟೇಶ್ ಭರವಸೆ ನೀಡಿದರು
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


