ರಷ್ಯಾ ಸೇನಾಪಡೆಗಳು ಉಕ್ರೇನಿನ ಇಂಧನ ಮೂಲ ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಒಂದೇ ಬಾರಿಗೆ 100 ಕ್ಷಿಪಣಿಗಳನ್ನು ಉಡಾಯಿಸಿವೆ. ಈ ಭೀಕರ ದಾಳಿಯಿಂದ ಉಕ್ರೇನಿನ ಹಲವೆಡೆ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದೆ. ಈ ಹಿಂದೆ ಅಕ್ಟೋಬರ್ 10 ಅಂದು ನಡೆಸಿದ ದಾಳಿಗಿಂತಲೂ ಈ ದಾಳಿ ಮಾರಕವಾಗಿದೆ ಎಂದು ಉಕ್ರೇನ್ ವಾಯುಪಡೆಯ ವಕ್ತಾರ ಯೂರಿ ಇಗ್ನಾಟ್ ತಿಳಿಸಿದ್ದಾರೆ.
ರಷ್ಯಾ ಪಡೆಗಳು ಉಕ್ರೇನಿನ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿದೆ. ನಿರ್ಣಾಯಕ ಮೂಲ ಸೌರ್ಯಕಗಳನ್ನು ಧ್ವಂಸಗೊಳಿಸುತ್ತಿವೆ. ಈ ಬಗ್ಗೆ ನಿಖರ ಮಾಹಿತಿಯನ್ನು ಉಕ್ರೇನ್ ಸೇನೆ ಅಥವಾ ಸಚಿವಾಲಯ ಇನ್ನಷ್ಟೇ ನೀಡಬೇಕಿದೆ.
ಉಕ್ರೇನ್ ಈ ಹಿಂದೆ ರಷ್ಯಾದ ಕ್ರಿಮಿಯಾ ಸೇತುವೆಯನ್ನು( ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ನಡೆಸಿತು. ನಿರಂತರ 75 ಕ್ಷಿಪಣಿಗಳು, 5 ಡೆಡ್ಲಿ ರಾಕೆಟ್‌ಗಳನ್ನು ಉಕ್ರೇನ್ ಮೇಲೆ ಉಡಾಯಿಸಿತ್ತು.. ಇದಾದ ಒಂದು ವಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ಹೇಳಿದ್ದರು. ಮತ್ತೆ 84 ಡೆಡ್ಲಿ ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಅದಕ್ಕಾಗಿ ಇರಾನಿ ಡ್ರೋನ್‌ಗಳನ್ನು ಬಳಸಲಾಗಿತ್ತು. ಈಗ ಏಕಾಏಕಿ ನೂರು ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಉಕ್ರೇನ್ ಜನರನ್ನು ಮತ್ತೆ ಬೆಚ್ಚಿ ಬೀಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


