ಮೈಸೂರು: ಪ್ರಧಾನಿ ಮೋದಿಯವರು ನಿಂತು ಭಾಷಣ ಮಾಡೋ ಕೆಂಪು ಕೋಟೆಯನ್ನು ಕಟ್ಟಿದ್ದೇ ಮುಸ್ಲಿಮರು.ಇಂತಹ ಕೆಂಪು ಕೋಟೆಯನ್ನು ಸಂಸದ ಪ್ರತಾಪ್ ಸಿಂಹ ಒಡೆಸಿ ಹಾಕುತ್ತಾರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಮೈಸೂರಿನಲ್ಲಿ ನಿರ್ಮಿಸಿರುವಂತ ಮಸೀದಿ ಗೋಪುರದ ರೀತಿಯ ಬಸ್ ನಿಲ್ದಾಣ ವಿವಾದ ಸಂಬಂಧ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿಯಾಗಿದೆ. ಅಲ್ಲದೇ ವಿದ್ಯಾ ನಗರಿ ಕೂಡ ಹೌದು. ಆದ್ರೇ ಸಂಸದ ಪ್ರತಾಪ್ ಸಿಂಹ ಮಾತ್ರ ಅಜ್ಞಾನದ ಕಡೆಗೆ ಕರೆದೊಯ್ಯುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಟಿಪ್ಪು ನಂಜುಂಡೇಶ್ವರನಿಗೆ ಕೊಟ್ಟ ಪಂಚ ವಜ್ರವನ್ನು ಪ್ರತಾಪ್ ಸಿಂಹ ವಾಪಾಸ್ ಇಸ್ಕೊಕೊಳ್ಳುತ್ತಾರಾ.ಪ್ರಧಾನಿ ಮೋದಿಯವರು ನಿಂತು ಮಾತನಾಡುವಂತ ಕೆಂಪು ಕೋಟೆಯನ್ನು ಮುಸ್ಲೀಮರು ಕಟ್ಟಿದ್ದು. ಹಾಗಂತ ಅದನ್ನು ಪ್ರತಾಪ್ ಸಿಂಹ ಒಡೆಸಿ ಬಿಡುತ್ತಾರಾ ಎಂಬುದಾಗಿ ಪ್ರಶ್ನಿಸಿದರು.
ಮುಸ್ಲಿಮರಲ್ಲಿ ಜಯಂತಿ, ಮೆರವಣಿಗೆಗೆ ಅವಕಾಶವಿಲ್ಲ. ಹೀಗಿದ್ದೂ ಟಿಪ್ಪು ಜಯಂತಿ ಮಾಡಿದ್ದು ದೊಡ್ಡ ತಪ್ಪು. ಮತ ರಾಜಕಾರಣಕ್ಕಾಗಿ ಟಿಪ್ಪು ಜಯಂತಿ ಮಾಡಿದ್ದಾರೆ. ನಾನು ಇದು ಬೇಡ ಅಂತ ಹೇಳಿದ್ದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


