nammatumakuru

    Subscribe to Updates

    Get the latest creative news from FooBar about art, design and business.

    What's Hot

    ತೋಟಗಾರಿಕೆ ಇಲಾಖೆ ಸಹಾಯ ಧನ: ಅರ್ಜಿ ಸಲ್ಲಿಸುವುದು ಹೇಗೆ?

    June 16, 2026

    ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ ಪ್ರದರ್ಶನಕ್ಕೆ ಜನಸಾಗರ: ಪ್ರಥಮ ಬಾರಿಗೆ ಕೊರಟಗೆರೆಯಲ್ಲಿ ಕಣ್ಮನ ಸೆಳೆಯುತ್ತಿರುವ ಶ್ರೀರಾಮ ಮಂದಿರ

    June 16, 2026

    ಸಿದ್ದರಬೆಟ್ಟ ಶ್ರೀಮಠದ 20ನೇ ವರ್ಷದ ಮಹೋತ್ಸವಕ್ಕೆ ಭರದ ಸಿದ್ಧತೆ: ಧರ್ಮ ಜಾಗೃತಿ, ಉಚಿತ ಸಾಮೂಹಿಕ ವಿವಾಹ, ‘‘ಸಿದ್ದಶ್ರೀ ಪ್ರಶಸ್ತಿ” ಪ್ರಧಾನ

    June 16, 2026
    Facebook Twitter Instagram
    ಟ್ರೆಂಡಿಂಗ್
    • ತೋಟಗಾರಿಕೆ ಇಲಾಖೆ ಸಹಾಯ ಧನ: ಅರ್ಜಿ ಸಲ್ಲಿಸುವುದು ಹೇಗೆ?
    • ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ ಪ್ರದರ್ಶನಕ್ಕೆ ಜನಸಾಗರ: ಪ್ರಥಮ ಬಾರಿಗೆ ಕೊರಟಗೆರೆಯಲ್ಲಿ ಕಣ್ಮನ ಸೆಳೆಯುತ್ತಿರುವ ಶ್ರೀರಾಮ ಮಂದಿರ
    • ಸಿದ್ದರಬೆಟ್ಟ ಶ್ರೀಮಠದ 20ನೇ ವರ್ಷದ ಮಹೋತ್ಸವಕ್ಕೆ ಭರದ ಸಿದ್ಧತೆ: ಧರ್ಮ ಜಾಗೃತಿ, ಉಚಿತ ಸಾಮೂಹಿಕ ವಿವಾಹ, ‘‘ಸಿದ್ದಶ್ರೀ ಪ್ರಶಸ್ತಿ” ಪ್ರಧಾನ
    • ಪಾವಗಡ: ಕಾಡುಗೊಲ್ಲ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
    • ಕೊರಟಗೆರೆ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ
    • ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ
    • ಔರಾದ್ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ್ ಮೊಕ್ತೆದಾರ್ ಆಯ್ಕೆ
    • ಜೂ.19: ಪಾವಗಡದಲ್ಲಿ ಜ್ಞಾನ ಬೋಧಿನಿ ಶಾಲೆಯ SPL ಚುನಾವಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಂಡೀಪುರದಲ್ಲಿರುವ ರಾಜ್ಯದ ಮೊಟ್ಟ ಮೊದಲ ‘ಪ್ರಾಜೆಕ್ಟ್ ಟೈಗರ್’ ಯೋಜನೆಗೆ 50 ವರ್ಷ
    ರಾಜ್ಯ ಸುದ್ದಿ November 17, 2022

    ಬಂಡೀಪುರದಲ್ಲಿರುವ ರಾಜ್ಯದ ಮೊಟ್ಟ ಮೊದಲ ‘ಪ್ರಾಜೆಕ್ಟ್ ಟೈಗರ್’ ಯೋಜನೆಗೆ 50 ವರ್ಷ

    By adminNovember 17, 2022No Comments2 Mins Read
    bandipura

    Provided by
    Provided by

    ಈ ವರ್ಷ ಬಂಡೀಪುರ ಹುಲಿ ಮೀಸಲಿನ ರಾಜ್ಯದ ಮೊಟ್ಟ ಮೊದಲ ‘ಪ್ರಾಜೆಕ್ಟ್ ಟೈಗರ್’ಗೆ ಸುರ್ವಣ ಮಹೋತ್ಸವದ ಸಂಭ್ರಮವಾಗಿದೆ. ಈ 50 ವರ್ಷಗಳಲ್ಲಿ, ಈ ಯೋಜನೆಯು ಇಡೀ ದೇಶಕ್ಕೆ ಮಾದರಿಯಾಗಿ ವಿಕಸನಗೊಂಡಿದೆ.
    ೧೯೭೨ರಲ್ಲಿ ಹುಲಿಗಳ ಸಂತತಿಯನ್ನು ಸಂರಕ್ಷಿಸಲು ದೇಶದಾದ್ಯಂತ ಹುಲಿ ಮೀಸಲು ಪ್ರದೇಶಗಳಲ್ಲಿ ‘ಪ್ರಾಜೆಕ್ಟ್ ಟೈಗರ್’ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ನವೆಂಬರ್ ೧೬, ೧೯೭೩ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಬಂಡೀಪುರದಲ್ಲಿ ಈ ‘ಪ್ರಾಜೆಕ್ಟ್ ಟೈಗರ್’ ಗೆ ಚಾಲನೆ ನೀಡಿದ್ದರು.

    ಈ ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಬಂಡೀಪುರದಲ್ಲಿ ಕೇವಲ ೧೨ ಹುಲಿಗಳಿದ್ದವು. ೨೦೨೦ರಲ್ಲಿ ನಡೆಸಿದಂತಹ ಹುಲಿಗಳ ಗಣತಿಯ ಪ್ರಕಾರ ಪ್ರಸ್ತುತ ಬಂಡೀಪುರ ಇಡೀ ದೇಶದಲ್ಲಿಯೇ ಎರಡನೇ ಅತೀ ಹೆಚ್ಚಿನ, ಅಂದರೆ ೧೪೩ ಹುಲಿಗಳು ಹಾಗೂ ೨೦೦ ಚಿರತೆಗಳನ್ನು ಹೊಂದಿರುವ ಮೀಸಲು ಪ್ರದೇಶವಾಗಿ ರೂಪುಗೊಂಡಿದೆ.

    ಬಂಡೀಪುರದ ‘ಪ್ರಾಜೆಕ್ಟ್ ಟೈಗರ್’ನ ನಿರ್ದೇಶಕ ಡಾ. ರಮೇಶ್ ಕುಮಾರ್ ಅವರ ಪ್ರಕಾರ, ಬಂಡೀಪುರ ದೇಶದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯ ಆನೆಗಳನ್ನು (೩,೦೪೬) ಹೊಂದಿವೆ. ಜೊತೆಗೆ ಇಲ್ಲಿ ಜಿಂಕೆಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಇತರೆ ಪ್ರಾಣಿಗಳು ಸೇರಿದಂತೆ ೨೬೦ಕ್ಕೂ ಹೆಚ್ಚಿನ ವಿವಿಧ ತಳಿಗಳ ಪಕ್ಷಿಗಳೂ ಇವೆ.
    ಬಂಡೀಪುರ ಹುಲಿ ಮೀಸಲು ಪ್ರದೇಶ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕುಗಳನ್ನೂ ವ್ಯಾಪಿಸುವಂತೆ ಒಟ್ಟು ೧,೦೩೬ ಚದರ ಕಿ.ಮೀ.ಗಳ ವ್ಯಾಪ್ತಿಯನ್ನು ಹೊಂದಿದೆ. ಮೈಸೂರು ಜಿಲ್ಲೆ, ತಮಿಳುನಾಡಿನ ಮುದುಮಲೈ ಹಾಗೂ ಕೇರಳದ ವಯನಾಡ್ ಹುಲಿ ಮೀಸಲು ಪ್ರದೇಶಗಳಿಂದ ಕೂಡಿರುವ ನಾಗರಹೊಳೆ ಹುಲಿ ಮೀಸಲು ಪ್ರದೇಶಕ್ಕೆ ಹೊಂದಿಕೊಂಡಂತಿದೆ.

    ಫೆಬ್ರವರಿ ೧೯, ೧೯೪೧ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ವೇಣುಗೋಪಾಲ ವನ್ಯಜೀವನಧಾಮ ಹಾಗೂ ಸುತ್ತಲಿನ ಇತರೆ ಅರಣ್ಯಗಳನ್ನು ವಿಲೀನಗೊಳಿಸಲಾಯಿತು. ೧೯೭೫ರಲ್ಲಿ ಈ ಭಾಗದ ಸುತ್ತಮುತ್ತಲಿನಲ್ಲಿರುವ ಇನ್ನೂ ಹಲವಾರು ಮೀಸಲು ಅರಣ್ಯ ಪ್ರದೇಶಗಳನ್ನು ಸೇರ್ಪಡೆಗೊಳಿಸಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಸಲಾಯಿತು. ನಂತರ ಇದರ ಪ್ರದೇಶ ವ್ಯಾಪ್ತಿ ೮೭೪.೨೦ ಚದರ ಕಿ.ಮೀ.ಗಳಿಗೆ ವಿಸ್ತಾರವಾಯಿತು.

    ಪರಿಸರ-ಪ್ರವಾಸೋದ್ಯಮದ ತಾನ ಎಂದೂ ಗುರುತಿಸಿಕೊಂಡಿರುವ ಬಂಡೀಪುರ, ಪ್ರಸ್ತುತ ಸಫಾರಿಗಳು ಹಾಗೂ ಅತಿಥಿ ಗೃಹಗಳ ಮೂಲಕ ವಾರ್ಷಿಕ ರೂ. ೧೦ ರಿಂದ ರೂ.೧೨ ಕೋಟಿ ಆದಾಯ ಗಳಿಸುತ್ತಿದೆ.

    ಬಂಡೀಪುರ ಅರಣ್ಯ ಪ್ರದೇಶ ಲಂಟಾನ ಸಸ್ಯಗಳಿಂದ ಆವೃತ್ತವಾಗಿದ್ದು, ಈವರೆಗೆ ಎಂಜಿಎನ್‌ ಆರ್‌ ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಹಾಗೂ ವಿವಿಧ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಗಳ ಸಹಾಯದೊಂದಿಗೆ ೮೦೦ ಹೆಕ್ಟೇರ್‌ ಗಳಷ್ಟು ಪ್ರದೇಶದಲ್ಲಿ ಇವುಗಳನ್ನು ತೆರವುಗೊಳಿಸಲಾಗಿದ್ದರೂ ಸಹ ಶೇ.60ರಷ್ಟು ಅರಣ್ಯ ಕಳೆಗಳಿಂದ ಕೂಡಿ ಸಮಸ್ಯೆ ಎದುರಿಸುತ್ತಿದೆ.

    ಮಾನವ-ಪ್ರಾಣಿಗಳ ನಡುವಿನ ಸಂಘರ್ಷ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ೧೫೬ ಗ್ರಾಮಗಳಿರುವ ಈ ಹುಲಿ ಮೀಸಲು ಪ್ರದೇಶದಲ್ಲಿ ಎದುರಾಗುತ್ತಿರುವ ಮತ್ತೊಂದು ಸವಾಲಾಗಿದೆ. ಜೊತೆಗೆ ಆಗಾಗ ಕಾಡ್ಗಿಚ್ಚು ಹಾಗೂ ಪ್ರಾಣಿಗಳ ಕಾನೂನುಬಾಹಿರ ಕಳ್ಳ ಸಾಗಣೆಗಳಂತಹ ಪ್ರಕರಣಗಳೂ ವರದಿಯಾಗುತ್ತಿರುತ್ತವೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    June 11, 2026

    26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!

    June 11, 2026

    ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!

    June 11, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ತೋಟಗಾರಿಕೆ ಇಲಾಖೆ ಸಹಾಯ ಧನ: ಅರ್ಜಿ ಸಲ್ಲಿಸುವುದು ಹೇಗೆ?

    June 16, 2026

    ಮಧುಗಿರಿ: ತೋಟಗಾರಿಕೆ ಇಲಾಖೆ ವತಿಯಿಂದ 2026-27 ನೆ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್/ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ತೋಟಗಾರಿಕೆಯಲ್ಲಿ…

    ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ ಪ್ರದರ್ಶನಕ್ಕೆ ಜನಸಾಗರ: ಪ್ರಥಮ ಬಾರಿಗೆ ಕೊರಟಗೆರೆಯಲ್ಲಿ ಕಣ್ಮನ ಸೆಳೆಯುತ್ತಿರುವ ಶ್ರೀರಾಮ ಮಂದಿರ

    June 16, 2026

    ಸಿದ್ದರಬೆಟ್ಟ ಶ್ರೀಮಠದ 20ನೇ ವರ್ಷದ ಮಹೋತ್ಸವಕ್ಕೆ ಭರದ ಸಿದ್ಧತೆ: ಧರ್ಮ ಜಾಗೃತಿ, ಉಚಿತ ಸಾಮೂಹಿಕ ವಿವಾಹ, ‘‘ಸಿದ್ದಶ್ರೀ ಪ್ರಶಸ್ತಿ” ಪ್ರಧಾನ

    June 16, 2026

    ಪಾವಗಡ: ಕಾಡುಗೊಲ್ಲ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    June 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.