ನಾಪತ್ತೆಯಾಗಿದ್ದ ಟ್ರಾನ್ಸ್‌ಪೋರ್ಟ್ ಉದ್ಯಮಿ ಬಾಲಸುಬ್ರಮಣ್ಯನ್ ಮೃತದೇಹ ಬೆಂಗಳೂರಿನ ಜೆ.ಪಿ ನಗರ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ಪುಟ್ಟೇನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು ಸಿಡಿಆರ್ ಪರಿಶೀಲಿಸಿ ಬಾಲಸುಬ್ರಮಣ್ಯನ್ ದೂರವಾಣಿ ಕರೆಗಳನ್ನು ವಿವರ ನೋಡಿದಾಗ ಮಹಿಳೆಯೊಬ್ಬಳ ಜೊತೆ ನಿರಂತರ ಸಂಪರ್ಕದಲ್ಲಿರುವ ವಿಚಾರ ತಿಳಿದುಬಂದಿದೆ.
ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಕೊನೆಯ ಲೊಕೇಷನ್ ತೋರಿಸುತ್ತಿದೆ. ಹೀಗಾಗಿ ಬಾಲಸುಬ್ರಮಣ್ಯನ್ ಸಂಪರ್ಕದಲ್ಲಿದ್ದ ಆ ಮಹಿಳೆ ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣ್ಯನ್ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದರು. ನವೆಂಬರ್ 17ರಂದು ಬಾಲ ಸುಬ್ರಮಣಿಯನ್ ಮೃತ ದೇಹ ಪತ್ತೆಯಾಗಿದ್ದು,ಹಲವು ಅನುಮಾನಗಳು ಮೂಡಿತ್ತು.
ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ಬಾಲ ಸುಬ್ರಮಣಿಯನ್, ಸಂಜೆ 04-55ಕ್ಕೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸವಿದೆ ಎಂದು ತಿಳಿಸಿದ್ದರು. ಅನಂತರ ಕರೆ ಮಾಡಿದರೆ ಅವರ ನಂಬರ್ ಸ್ವಿಚ್ಡ್ ಆಫ್ ಬಂದಿದೆ. ಮಗ ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು.
೧೭ರಂದು ಜೆ.ಪಿ ನಗರ 6ನೇ ಹಂತದ ಸಮೀಪ ಮೃತ ದೇಹ ಪತ್ತೆಯಾಗಿದ್ದು, ಮಗ ಸ್ಥಳಕ್ಕೆ ಬಂದು ನೋಡಿದಾಗ ತಂದೆಯ ಮೃತ ದೇಹದ ಗುರುತು ಪತ್ತೆಯಾಗಿತ್ತು. ಮೃತ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಆದರೆ ಪ್ಲಾಸ್ಟಿಕ್ ಚೀಲಗಳಿಂದ ಮುಖ ಹಾಗೂ ಕಾಲುಗಳನ್ನು ಮುಚ್ಚಲಾಗಿತ್ತು. ಈ ಸಾವಿನ ಬಗ್ಗೆ ಸಂಶಯವಿರುವುದರಿಂದ ಸೂಕ್ತ ತನಿಖೆ ನಡೆಸುವಂತೆ ಪುತ್ರ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


