ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಸಮಾಜ ಪಾರ್ಟಿ(BSP)ಯ ಜಿಲ್ಲಾಧ್ಯಕ್ಷರಾದ ದಾಸಪ್ಪ ಎಡಪದವು ಅವರು ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮುಂಜಾನೆ ವೇಳೆಗೆ ಎದೆನೋವಿನಿಂದ ಅಸ್ವಸ್ಥರಾದ ದಾಸಪ್ಪ ಅವರನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ದಾಸಪ್ಪ ಎಡಪದವು ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಚಳುವಳಿಯ ಪ್ರಭಾವಿ ನಾಯಕರಾಗಿದ್ದು, ಜಿಲ್ಲೆಯ ದಲಿತ ಪರ ಹೋರಾಟ, ಸಂಘಟನೆಗಳ ಪೋಷಕರೂ ಆಗಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


