ಮಂಗಳೂರು: 20,000 ಅಂಗನವಾಡಿ ಮತ್ತು 6000 ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 25 ರಂದು ಎನ್ ಇಪಿ ಜಾರಿಗೆ ಉದ್ದೇಶಿಸಿದ್ದು, ಇದರ ರಾಜ್ಯ ಪಠ್ಯಕ್ರಮ ನವೆಂಬರ್ ಅಂತ್ಯಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಎನ್ ಇಪಿ ವಿಶೇಷತೆ ಎಂದರೆ ಪಠ್ಯಪುಸ್ತಕಗಳನ್ನು ಹೇರುವುದಿಲ್ಲ. ಬದಲಾಗಿ ಪಠ್ಯದ ಹೊರೆ ಕಡಿಮೆಯಾಗಲಿದೆ. ಒಂದನೇ ಮತ್ತು ಎರಡನೇ ತರಗತಿಗೆ ಎರಡೆರಡು ಪುಸ್ತಕಗಳು ಇರುತ್ತವೆ. ಸಂಖ್ಯಾಶಾಸ್ತ್ರ ವಿಚಾರಗಳನ್ನು ತಿಳಿಸುವುದು, ಅಕ್ಷರ ಜ್ಞಾನ ನೀಡುವ ಪುಸ್ತಕ ಇರುತ್ತದೆ.
ಈಗಾಗಲೇ ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಚಿಲಿಪಿಲಿ, ನಲಿ-ಕಲಿ ಮೂಲಕ ಎನ್ ಇಪಿ ಆಶಯಗಳನ್ನು ಜಾರಿಗೊಳಿಸಲಾಗಿದೆ. ಅಂಗನವಾಡಿ ಶಿಕ್ಷಕಿಯರಿಗೆ ಎನ್‌ಇಪಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


