ಝೀ ಟಿವಿಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಮೂಲಕ ಬೆಳಕಿಗೆ ಬಂದ ನಯನಾ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಿದ್ದಕ್ಕಾಗಿ ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣದ ಹಂಚಿಕೆ ವಿಚಾರಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ನಯನಾ ಮತ್ತು ಟೀಮ್ ಬಹುಮಾನ ರೂಪದಲ್ಲಿ 3 ಲಕ್ಷ ರೂ. ಗಳಿಸಿತ್ತು. ತಂಡದಲ್ಲಿದ್ದ ಸೋಮಶೇಖರ್ ಸರಿಯಾದ ಪಾಲು ಕೊಟ್ಟಿಲ್ಲ ಎಂದು ಇಬ್ಬರ ನಡುವೆ ಮನಸ್ತಾಪ ಆಗಿತ್ತು.
ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡುತ್ತಾರೆ. ನಾನು ಸ್ಟೇಶನ್ ನಲ್ಲೇ ಇದ್ದೇನೆ. ನೀನು ಹಣ ಕೊಡದೇ ಇದ್ದರೆ, ನಿನ್ನನ್ನು ಏನು ಬೇಕಾದರೂ ಮಾಡುವುದಕ್ಕೆ ರೆಡಿ ಎಂದು ನಯನಾರ ಧ್ವನಿ ಎಂದು ಹೇಳಲಾದ ಆಡಿಯೋದಲ್ಲಿ ಧಮ್ಕಿ ಹಾಕಿರುವ ನಯನಾ ಧ್ವನಿ ಎಂದು ಹೇಳಲಾಗಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಯನಾ ಆರೋಪದಲ್ಲಿ ಹುರುಳಿಲ್ಲ. ನಾನು ಯಾರಿಗೂ ಹಣ ಕೊಡಬೇಕಾಗಿಲ್ಲ. ಚಾನಲ್ ಹೇಳಿದಂತೆ ನಾನು ಮಾಡಿದ್ದೇನೆ. ಆದರೆ, ನಯನಾ ಹಣದ ವಿಚಾರವಾಗಿ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ ಸೋಮಶೇಖರ್. ಸದ್ಯ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಲಾಗಿದೆ.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


