ಧಾರವಾಡ : ಕ್ರಾಸ್‌ನಲ್ಲಿ ರೋಡ್ ಕ್ರಾಸ್ ಮಾಡುವಾಗ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಳಗಲಿ ಕ್ರಾಸ್ ಬಳಿ ಸಂಭವಿಸಿದೆ.
29 ವರ್ಷದ ಮಹಮ್ಮದ್ ನವಾಜ್ ಮೃತ ದುರ್ದೈವಿ. ಲಾರಿ ಡಿಕ್ಕಿಗೆ ಬೈಕ್ ಬಹುದೂರಕ್ಕೆ ಹೋಗಿ ಬಿದ್ದಿದ್ದು, ನವಾಜ್ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಮೃತ ಮಹಮ್ಮದ್ ನವಾಜ್ ಹುಬ್ಬಳ್ಳಿಯ ತಬೀಬ್‌ಲ್ಯಾಂಡ್ ನಿವಾಸಿಯಾಗಿದ್ದು, ಕೆಲಸದ ನಿಮಿತ್ತ ಧಾರವಾಡ ಕಡೆಗೆ ಬಂದಿದ್ದರು.
ಲಾರಿ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿ ನವಾಜ್ ಪ್ರಾಣ ಕಳೆದುಕೊಳ್ಳುತ್ತಿದ್ದಂತೆಯೇ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಡಿಕ್ಕಿಯಾಗೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


