ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಗೋಲಿನ ಖಾತೆ ತೆರೆದರೂ ಮಾಜಿ ಚಾಂಪಿಯನ್ ಅರ್ಜೆಂಟೀನಾ ತಂಡ 2-1 ಗೋಲುಗಳಿಂದ ಸೌದಿ ಅರೆಬಿಯಾ ವಿರುದ್ಧದ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆಘಾತ ಅನುಭವಿಸಿದೆ.
ಮಂಗಳವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 1-2 ಗೋಲುಗಳಿಂದ ಸೌದಿ ಅರೆಬಿಯಾ ವಿರುದ್ಧ ಸೋಲುಂಡಿತು. ಈ ಮೂಲಕ ಟೂರ್ನಿಯ ಆರಂಭಿಕ ಹಂತದಲ್ಲೇ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.
ಅರ್ಜೆಂಟೀನಾ ಪರ ಲಿಯೊನೆಲ್ ಮೆಸ್ಸಿ (10ನೇ ನಿಮಿಷ) ಪೆನಾಲ್ಟಿಯಲ್ಲಿ ಗೋಲಿನ ಖಾತೆ ತೆರೆದು ಶುಭಾರಂಭ ಮಾಡಿದರು. ಆದರೆ ಸೌದಿ ಅರೆಬಿಯಾ ಎರಡನೇ ಹಂತದಲ್ಲಿ ತಿರುಗಿಬಿದ್ದು ಎರಡು ಗೋಲು ಬಾರಿಸಿ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿತು. ಸೌದಿ ಅರೆಬಿಯಾ ಪರ ಸಲಾಹ್ ಅಲ್ಶೆಹರಿ (48ನೇ ನಿಮಿಷ) ಮತ್ತು ಸಲೀಂ ಅಲ್ದಾಸರಿ (53ನೇ ನಿಮಿಷ) ಗೋಲು ಸಿಡಿಸಿದರು.
ಸೌದಿ ಅರೆಬಿಯಾಗೆ ಹೋಲಿಸಿದರೆ ಅರ್ಜೆಂಟೀನಾ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿತ್ತು. ಅರ್ಜೆಂಟೀನಾ 14 ಬಾರಿ ಗುರಿ ಇಟ್ಟರೆ, ಸೌದಿ ಕೇವಲ 3 ಬಾರಿ ಮಾತ್ರ ಗುರಿಗೆ ಹೊಡೆಯಿತು. ಅದರಲ್ಲೂ ಮೆಸ್ಸಿ ಸ್ವತಃ ನಾಲ್ಕೈದು ಬಾರಿ ಗೋಲಿನತ್ತ ಚೆಂಡು ಬಾರಿಸಿದರೂ ಸೌದಿ ಗೋಲ್ ಕೀಪರ್ ಹಾಗೂ ರಕ್ಷಣಾ ಆಟಗಾರರು ಮೆಸ್ಸಿಯನ್ನು ತಡೆಯುವಲ್ಲಿ ಯಶಸ್ವಿಯಾದರು.
Reporting by Antony begur
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


