ಸೋದರತ್ತೆ ಹೃದಯಾಘಾತದಿಂದ ಸಾವಿನ ಸುದ್ದಿ ಕೇಳಿ ಅಳಿಯ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಸಂಭವಿಸಿದೆ.
ಸೋದರತ್ತೆ ಲಕ್ಷಮ್ಮ (58) ಮತ್ತು ಅಳಿಯ ಗುಲ್ಫತ್ ಸಿಂಗ್ (45) ಮೃತಪಟ್ಟ ದುರ್ದೈವಿಗಳು.
ಬೆಂಗಳೂರಿನ ಸಂಬಂಧಿಕರ ಮನೆಗೆ ಹೊರಟ್ಟಿದ್ದ ಲಕ್ಷ್ಮಮ್ಮ ಹೊರಟ್ಟಿದ್ದರು. ದಾರಿಮಧ್ಯೆದಲ್ಲಿ ಬಸ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಸ್ ನಿರ್ವಾಹಕ ಲಕ್ಷ್ಮಮ್ಮ ಸಾವಿನ ಸುದ್ದಿಯನ್ನು ಸಂಬಂಧಿಕರಿಗೆ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ನಡೆದು ಬರುತ್ತಿದ್ದ ಗುಲ್ಫತ್ ಸಿಂಗ್ ಗೆ ಸಂಬಂಧಿಕರು ಕರೆ ಮಾಡಿ ವಿಷಯ ತಿಳಿಸಿದ್ದು, ವಿಷಯ ಕೇಳಿದ ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Reporting by Antony begur
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


