ಹಣ ಕೊಡಲಿಲ್ಲ ಅಂತ ರಾಡ್ ನಿಂದ ಹೊಡೆದು ಗೆಳೆಯನನ್ನು ಕೊಂದು ಮೃತದೇಹವನ್ನು ಪೊಲೀಸ್ ಠಾಣೆಗೆ ತಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹಿಮದಗುಂಡಿಯಲ್ಲಿ ಈ ಘಟನೆ ನಡೆದಿದ್ದು, ಮಹೇಶಪ್ಪ ಎಂಬಾತನನ್ನು ಕೊಲೆ ಮಾಡಿರುವ ರಾಜಶೇಖರ್ ಮೃತದೇಹವನ್ನು ಕಾರಿನಲ್ಲಿ ತಂದು ರಾಮಮೂರ್ತಿನಗರ ಪೊಲೀಸ್ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.
ಮಹೇಶಪ್ಪ ಸುಮಾರು 1.5 ಕೋಟಿ ರೂ. ಹಣ ಪಡೆದಿದ್ದು, ಹಿಂತಿರುಗಿಸಿರಲಿಲ್ಲ. ಆದ್ದರಿಂದ ರಾಜಶೇಖರ್ ಸೋಮವಾರ ರಾತ್ರಿ ಮಹೇಶಪ್ಪನನ್ನು ಕಾರಿನಲ್ಲಿ ಕರೆದುಕೊಂಡು ಬಂದು ಹಿಮದಗುಂಡಿ ಬಳಿ ಮಾತನಾಡಿದ್ದಾರೆ.
ಕಾರಿನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ರಾಜಶೇಖರ್ ಹಣ ಹಿಂತಿರುಗಿಸುವಂತೆ ಕೇಳಿದ್ದಾನೆ. ಆದರೆ ರಾಜಶೇಖರ್ ನಿರಾಕರಿಸಿದ್ದರಿಂದ ಸಿಟ್ಟಿನಿಂದ ಮಹೇಶಪ್ಪನ ತಲೆಗೆ ರಾಡ್ ನಿಂದ ಹೊಡೆದಿದ್ದಾರೆ.
ರಾಡ್ ನಿಂದ ಹೊಡೆದ ನಂತರ ಇಬ್ಬರು ಕಾರಿನಲ್ಲಿಯೇ ಮಲಗಿದ್ದಾರೆ. ಬೆಳಿಗ್ಗೆ ಎದ್ದಾಗ ಮಹೇಶಪ್ಪ ಮೃತಪಟ್ಟಿರುವುದು ತಿಳಿದು ರಾಜಶೇಖರ್ ಆಘಾತಕ್ಕೆ ಒಳಗಾಗಿದ್ದಾನೆ. ಮುಂದೇನು ಮಾಡಬೇಕು ಅಂತ ಗೊತ್ತಾಗದೇ ನೇರ ಪೊಲೀಸ್ ಠಾಣೆಗೆ ಕಾರಿನಲ್ಲಿ ಶವದೊಂದಿಗೆ ಬಂದು ಶರಣಾಗಿದ್ದಾನೆ.
ಮಹೇಶಪ್ಪ ಈ ಹಿಂದೆ ಕೂಡ ಸಾಲ ಕೊಡಿಸ್ತೀನಿ ಅಂತ ಹಲವರಿಗೆ ವಂಚನೆ ಮಾಡಿದ್ದ ಎಂಬುದು ತಿಳಿದು ಬಂದಿದೆ. ರಾಮಮೂರ್ತಿನಗರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ರಾಜಶೇಖರ್ ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Reporting by Anthony Begur
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


