ಕೆಲವರಿಗೆ ಯಾವಾಗಲೂ ಏನೇ ತಿಂದರೂ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆ, ಮತ್ತೆ ಕೆಲವರಿಗೆ ಚಳಿಗಾಲದಲ್ಲಿ ಜೀರ್ಣಕ್ರಿಯೆಯಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳುವುದೂ ಇದೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ.
ಒಮ್ಮೆ ಜೀರ್ಣಕ್ರಿಯೆ ಸಮಸ್ಯೆ ಶುರುವಾದರೆ ಸರಿಯಾಗಲು ಹಲವು ದಿನಗಳೇ ಬೇಕು. ಆಗ ಆಹಾರದ ಆಯ್ಕೆಯಲ್ಲಿ ಎಚ್ಚರಿಕೆ ಅಗತ್ಯ. ಮತ್ತಷ್ಟು ಹೊಟ್ಟೆಯ ಸಮಸ್ಯೆಗೆ ಕಾರಣಾಗುವ ಆಹಾರಗಳನ್ನು ಸೇವನೆ ಗಂಭೀರ ಕಾಯಿಲೆಗೆ ದಾರಿ ಮಾಡಿಕೊಡಬಹುದು.
ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗಿ ಇರಿಸಿಕೊಳ್ಳಲು ಆಹಾರದಲ್ಲಿ ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ ಒಳ್ಳೆಯದು. ಆಹಾರ ತಯಾರಿಸುವಾಗ ಚಿಟಿಕೆ ಅರಿಶಿನ ಬಳಕೆ ಕಡ್ಡಾಯವಿರಲಿ. ಇದರಲ್ಲಿ ಉರಿಯೂತವನ್ನು ನಿವಾರಿಸುವ ಗುಣವಿದೆ. ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಅರಿಶಿನ ಹೊಟ್ಟೆಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಚಿಯಾ ಬೀಜಗಳು ಅಥವಾ ಕಾಮಕಸ್ತೂರಿ ಕರುಳಿನ ಉರಿಯೂತವನ್ನು ನಿವಾರಿಸಿ ಚಯಾಪಚಯ ಕ್ರಿಯೆ ಸುಗಮಗೊಳಿಸುತ್ತದೆ. ಆಹಾರ ಜೀರ್ಣವಾಗಿ ಮಲವಿಸರ್ಜನೆ ಆಗುವಂತೆ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಹಣ್ಣುಗಳ ಸಲಾಡ್ ಜೊತೆ ನೆನೆಸಿದ ಚಿಯಾ ಬೀಜಗಳನ್ನು ತಿನ್ನುವುದು ಉತ್ತಮ.
ಹೇರಳವಾದ ಫೈಬರ್ ಅಂಶವನ್ನು ಹೊಂದಿರುವ ಪೇರಳೆ ಹಣ್ಣು ಜೀರ್ಣಕ್ರಿಯೆ ಸರಿಯಾಗಿರುವಂತೆ ಮಾಡುತ್ತದೆ. ಅದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಚಳಿಗಾಲದಲ್ಲಿ ಪೇರಳೆ ಹಣ್ಣನ್ನು ತಿನ್ನುವುದರಿಂದ ಹೆಚ್ಚು ಪ್ರಯೋಜನವಿದೆ.
ಮೊಸರು ಉತ್ತಮ ಪ್ರೊಬಯಾಟಿಕ್ ಅಂಶಗಳನ್ನು ಒಳಗೊಂಡಿದ್ದು, ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಹೆಚ್ಚು ಮಸಾಲೆ, ಖಾರದ ಆಹಾರ ಸೇವಿಸಿದಾಗ ಹೊಟ್ಟೆಯಲ್ಲಿ ಸಂಕಟ, ಗ್ಯಾಸ್ಟ್ರಿಕ್ ಕಾಣಿಸಿಕೊಳ್ಳುತ್ತದೆ. ಅದನ್ನು ನಿವಾರಿಸಲು ಮೊಸರು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಉತ್ತಮವಾಗಿಸಲು ಸಹಕಾರಿ. ಇದರಿಂದ ಅಜೀರ್ಣ ಸಮಸ್ಯೆ ದೂರವಾಗುವುದು.
ಪ್ರತಿದಿನ ಮಧ್ಯಾಹ್ನ ಊಟ ಮಾಡುವ ಮೊದಲು ಸಣ್ಣ ಶುಂಠಿ ಚೂರು ಹಾಗೂ ಉಪ್ಪನ್ನು ಸೇರಿಸಿ ತಿಂದರೆ ಅಜೀರ್ಣ ಆಗದು. ಆಗಾಗ ಶುಂಠಿಯನ್ನು ಆಹಾರದಲ್ಲಿ ಬಳಕೆ ಮಾಡಿದರೆ ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz