ತಮಿಳುನಾಡಿನ ಗೊಬಿಚೆಟ್ಟಿಪಾಳ್ಯಂ ನಿವಾಸಿ ಜ್ಯೋತಿಷಿಯ ಮಾತುಕೇಳಿ ಹಾವಿನಿಂದ ಕಚ್ಚಿಸಿಕೊಂಡು ನಾಲಗೆ ಕಳೆದುಕೊಂಡಿದ್ದಾನೆ. ಈತನಿಗೆ ದಿನವೂ ಹಾವಿನ ಕನಸು ಬೀಳುತ್ತಿತ್ತಂತೆ. ಹಾವಿನಿಂದ ಕಚ್ಚಿಸಿಕೊಂಡಂತೆ ಕನಸು ಬೀಳುತ್ತಿದ್ದ ಹಿನ್ನೆಲೆಯಲ್ಲಿ ಈತ ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬರ ಬಳಿ ಹೋಗಿದ್ದಾನೆ. ಜ್ಯೋತಿಷಿ ಹಾವಿನ ಪೂಜೆ ಮಾಡುವಂತೆ ಸಲಹೆ ನೀಡಿದ್ದಾನೆ.
ಹಾವಿನ ಹುತ್ತ ಇರುವ ದೇಗುಲವನ್ನು ಪೂಜೆಗಾಗಿ ಸಲಹೆ ಮಾಡಿದ್ದಾನೆ. ಪೂಜೆಯ ನಂತರ ಹಾವಿಗೆ ತನ್ನ ನಾಲಿಗೆಯನ್ನು ತೋರಿಸುವಂತೆ ಸಲಹೆ ನೀಡಿದ್ದಾನೆ. ಜ್ಯೋತಿಷಿಯ ಸಲಹೆಯಂತೆ ನಾಲಗೆಯನ್ನು ಹಾವಿನ ಮುಂದೆ ಚಾಚಿ ನಿಂತಿದ್ದಾನೆ. ಸಿಟ್ಟಿಗೆದ್ದ ಹಾವು ನಾಲಗೆಯನ್ನು ಕಚ್ಚಿದೆ. ಜೊತೆಯಲ್ಲಿದ್ದ ಸಂಬಂಧಿ ಹಾಗೂ ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜೀವ ಉಳಿಸುವ ಸಲುವಾಗಿ ವೈದ್ಯರು ಆತನ ನಾಲಗೆಯನ್ನು ಕತ್ತರಿಸಿದ್ದಾರೆ.
ಈರೋಡ್ ಮನಿಯನ್ ಮೆಡಿಕಲ್ ಆಸ್ಪತ್ರೆಯ ಮುಖ್ಯಸ್ಥ, ಡಾಕ್ಟರ್ ಎಸ್. ಸೆಂಥಿಲ್ ಕುಮಾರನ್ ಮಾತನಾಡಿ, ನವೆಂಬರ್ 18 ರಂದು ಈ ವ್ಯಕ್ತಿಗೆ ಹಾವು ಕಚ್ಚಿದ ಕಾರಣ ಬಾಯಲ್ಲಿ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಹಾವಿನ ವಿಷದಿಂದಾಗಿ ಆತನ ನಾಲಗೆಯ ಅಂಗಾಂಶಕ್ಕೆ ಹಾನಿಯಾಗಿತ್ತು.
ಜೀವ ಉಳಿಸುವ ಸಲುವಾಗಿ ನಾಲಗೆಯನ್ನು ಕತ್ತರಿಸಬೇಕಾಯಿತು. ನಾಲಗೆಯನ್ನು ಕತ್ತರಿಸಿದ ಬಳಿಕವೂ ಆತನ ಜೀವ ಉಳಿಸಲು ನಾವು ನಾಲ್ಕು ದಿನ ಹರಸಾಹಸ ಪಟ್ಟಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


