ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಯ ಪರೀಕ್ಷೆಯಲ್ಲಿ ನಡೆದಿದ್ದಂತ ಅಕ್ರಮ ಸಂಬಂಧ, ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋಕಾಕ್ ನ ಶಹರ ಠಾಣೆಯ ಪೊಲೀಸರು, ಮೂಡಲಗಿ ತಾಲೂಕಿನ ರಾಜಾಪುರ ನಿವಾಸಿಯಾಗಿರುವಂತ ಬಾಳೇಶ್ ಕಟ್ಟಿಕಾರ್ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಬಾಳೇಶ್ ಕಟ್ಟಿಕಾರ್ ಅವರು ಆಗಸ್ಟ್ 7, 2022ರಂದು ನಡೆದಿದ್ದಂತ ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಯ ಪರೀಕ್ಷೆಯಲ್ಲಿ ಅಕ್ರಮಕ್ಕಾಗಿ ಎಲೆಕ್ಟ್ರಾನಿಕ್ ಡಿವೈಸರ್ ಸಪ್ಲೈ ಮಾಡಿದ್ದ ಎಂಬುದಾಗಿ ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


