ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಮಹಾರಾಷ್ಟ್ರದ ಗಡಿಯಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಪುಣೆಯಿಂದ ಅಥಣಿಗೆ ಸಂಚರಿಸುತ್ತಿದ್ದ ಬಸ್ಸಿನ ಮುಂಭಾಗದ ಗಾಜು ಹಾಗೂ ಎರಡು ಕಿಟಕಿ ಒಡೆದಿವೆ. ಬಸ್ ಸಂಚರಿಸುವಾಗ ರಸ್ತೆಗೆ ಅಡ್ಡಬಂದ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ. ಬಸ್ಸಿನ ಚಾಲಕ ಕುಳಿತಿದ್ದ ಭಾಗದ ಗಾಜು ಒಡೆದು ಹೋದರೂ ಚಾಲಕ ವಾಹನ ನಿಲ್ಲಿಸದೇ ಸುರಕ್ಷಿತವಾಗಿ ಗಡಿ ದಾಟಿಸಿದ್ದಾರೆ.
ಮೀರಜ್ ಮಾರ್ಗವಾಗಿ ಸಂಚರಿಸುವ ಕರ್ನಾಟಕದ ಎಲ್ಲ ಬಸ್ ಸಂಚಾರವನ್ನು ಶನಿವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾಗವಾಡ ಮಾರ್ಗವಾಗಿ ಪ್ರತಿ ದಿನ ಸಾವಿರಾರು ಪ್ರಯಾಣಿಕರು ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಕಿಡಿಗೇಡಿಗಳು ಇದೇ ಬಸ್ಸುಗಳನ್ನು ಗರಿಯಾಗಿಸಿ ಕಲ್ಲು ತೂರಿದ್ದಾರೆ.
ರಾಜ್ಯದ ಬಸ್ಸುಗಳ ಮೇಲೆ ಮಹಾರಾಷ್ಟ್ರದಲ್ಲಿ ದಾಳಿ ಮುಂದುವರಿದ ಕಾರಣ ಈ ಮಾರ್ಗದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


