ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಗಡಿ ವಿವಾದ ಮುಗಿದರೂ ಮಹಾರಾಷ್ಟ್ರ ರಾಜಕೀಯವಾಗಿ ಡೈವರ್ಟ್ ಮಾಡಲು ಯತ್ನಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಕಿಡಿಕಾರಿದರು.
ಈ ಕುರಿತು ಇಂದು ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್, ಗಡಿವಿವಾದ ವಿಚಾರವನ್ನ ಮಹಾರಾಷ್ಟ್ರ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇವರು ಖ್ಯಾತೆ ತೆಗೆದರೇ ಸೊಲ್ಲಾಪುರ ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟೆ ಸೇರಿ ಬಹಳ ಪ್ರದೇಶಗಳು ನಮಗೆ ಬರುತ್ತವೆ. ಇದೀಗ ಜತ್ ಭಾಗದ ಜನ ಕರ್ನಾಟಕಕ್ಕೆ ಸೇರುತೇವೆ ಎಂದು ಹೇಳುತ್ತಿದ್ದಾರೆ.
ಮಹಾರಾಷ್ಟ್ರ ಸರ್ಕಾರ ತಮ್ಮಲ್ಲಿರುವ ಪ್ರದೇಶ ಅಭಿವೃದ್ದಿ ಮಾಡಿಲ್ಲ. ಜತ್ ಭಾಗದಲ್ಲಿ ಕುಡಿಯುವ ನೀರು ಪೂರೈಸಿಲ್ಲ, ಜತ್ ಭಾಗದ ಜನ ಕರ್ನಾಟಕ್ಕೆ ಸೇರ್ಪಡೆ ಬಹಳ ಸೂಕ್ಷ್ಮವಾದದ್ದು . ಇದನ್ನ ಸರ್ವ ಪಕ್ಷ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


