ಚೀನಾದ ಹಲವು ನಗರಗಳಲ್ಲಿ ಕೊರೋನ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರ ಮತ್ತೆ ಲಾಕ್ಡೌಗೆ ಮುಂದಾಗಿದೆ. ಭಾನುವಾರ ಒಂದೇ ದಿನ 40,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲಿನ ಸರ್ಕಾರವು ಘೋಷಿಸುತ್ತಿರುವ ಲಾಕ್‌ಡೌನ್ ಆದೇಶಗಳು ಜನರನ್ನು ಸಿಟ್ಟಿಗೆಬ್ಬಿಸಿದೆ. ಜನಾಕ್ರೋಶವು ಆಡಳಿತಕ್ಕೆತಲೆನೋವಾಗಿ ಪರಿಣಮಿಸಿದೆ.
ಚೀನಾದ ಷಿನ್ಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಂಖಿ ನಗರದಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಬೆಂಕಿ ಅನಾಹುತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಲಾಕ್‌ಡೌನ್ ನಿರ್ಬಂಧಗಳಿಂದ ತೊಂದರೆಯಾಯಿತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಜಿಂಗ್ ನಗರದ ನದಿ ದಂಡೆಯ ಮೇಲೆ ಜನ ಹಲವು ಗಂಟೆಗಳವರೆಗೆ ಪ್ರತಿಭಟನೆ ನಡೆಸಿದರು.
ಲಾಕ್‌ಡೌನ್ ಹೆಸರಿನಲ್ಲಿ ಹಲವು ಅಪಾರ್ಟ್ಮೆಂಟ್ ಹಾಗೂ ಕಟ್ಟಡ ಸಮುಚ್ಚಯಗಳಿಗೂ ಬೀಗಮುದ್ರೆ ಹಾಕಲಾಗಿದೆ. ಈ ಕಟ್ಟಡಗಳ ಕಾಂಪೌಂಡ್ ಒಳಗೆ ಜನರು ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಆಡಳಿತಾರೂಢ ಚೀನಾ ಕಮ್ಯುನಿಸ್ಟ್‌ಪಕ್ಷ (ಸಿಪಿಸಿ) ಮತ್ತು ಅಧ್ಯಕ್ಷ ಷಿ ಜಿನ್‌ಪಿಂಗ್‌ವಿರುದ್ಧ ಘೋಷಣೆ ಕೇಳಿ ಬರುತ್ತಿದೆ. ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಕೈಜೋಡಿಸಿದ್ದಾರೆ.
ಶಾಂಘೈನಲ್ಲಿ ನಡೆದ ಲಾಕ್‌ಡೌನ್ ವಿರೋಧಿ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿವೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು. ಈ ವೇಳೆ ಜನರು ‘ಷಿ ಜಿನ್ಪಿಂಗ್ ಅಧಿಕಾರದಿಂದ ಕೆಳಗಿಳಿಯಲಿ, ಕಮ್ಯುನಿಷ್ಟ ಪಕ್ಷವು ಅಧಿಕಾರ ತ್ಯಾಗ ಮಾಡಲಿ, ಜನರಿಗೆ ಸ್ವಾತಂತ್ರ್ಯ ಸಿಗಲಿ’ ಎಂದು ಘೋಷಣೆ ಕೂಗುತ್ತಿದ್ದಾರೆ. ಆರ್ಥಿಕ ಹಿಂಜರಿತದ ಭೀತಿಯಲ್ಲಿ ಸಿಲುಕಿರುವ ಚೀನಾದಲ್ಲಿ ಲಾಕ್‌ಡೌನ್ ನಿಭಾಯಿಸುವುದು ದೊಡ್ಡ ಸವಾಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


