ರೌಡಿಶೀಟರ್ ಆಗಿದ್ದ ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಕೆ.ಆರ್ ಪೇಟೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸೈಲೆಂಟ್ ಸುನೀಲನ ಕಾರ್ಯಕ್ರಮದಲ್ಲಿ ಇಬ್ಬರು ಸಂಸದರು ಓರ್ವ ಶಾಸಕರು ಭಾಗಿಯಾಗಿದ್ದಾರೆ. ಸೈಲೆಂಟ್ ಸುನೀಲ ಸರ್ಚ್ ವಾರೆಂಟ್ ನಲ್ಲಿದ್ದಾನೆ . ಏನು ಹೇಳಿದ್ರು ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ. ಅದೊಂದು ರೀತಿ ಬಿಜೆಪಿಗೆ ಅಂಟುರೋಗವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ನೀವು ಅನೈತಿಕವಾಗಿ ಬಂದಿದ್ದೀರಿ. ನಮ್ಮನ್ನು ಬಿಡಿ ಮೊದಲು ನೀವು ಏನು ಮಾಡಿದ್ದಿರಿ ಹೇಳಿ ರೌಡಿಶೀಟರ್ ಜೊತೆ ಸಂಸದರು ವೇದಿಕೆ ಹಂಚಿಕೊಳ್ಳುವುದು ಸರಿನಾ…? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ಹೆಸರು ನೋಡು ಫೈಟರ್ ರವಿ ಅಂತೆ. ಆರ್ ಎಸ್ ಎಸ್, ಬಿಜೆಪಿಯವರು ಬರೀ ಇಂತಹದ್ದೆ ಕೆಲಸ ಮಾಡೋದು. ಸಿಸಿಬಿ ಪೊಲೀಸರು ಸುನೀಲನನ್ನ ಹುಡುಕುತ್ತಿದ್ದಾರೆ. ಆತನನ್ನ ಬಿಜೆಪಿಗೆ ಸೇರ್ಪಡೆ ಮಾಡಿದ್ರೆ ಅತನನ್ನ ಹಿಡಿಯಲು ಸಾಧ್ಯವೇ..? ಎಂದು ಸಿದ್ಧರಾಮಯ್ಯ ಹರಿಹಾಯ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


