ಹಿರಿಯ ಪತ್ರಕರ್ತರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಎನ್ ಡಿಟಿವಿಯ ನಿರ್ದೇಶಕ ಸ‍್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಎನ್ನಲಾದ ಗೌತಮ್ ಆದಾನಿ ಎನ್ ಡಿಟಿವಿಯ ನಿರ್ದೇಶಕ ಮಂಡಳಿಯಾದ ಆರ್ ಆರ್ ಆರ್ ಆರ್ ಹೋಲ್ಡಿಂಗ್ ಪ್ರವೇಟ್ ಲಿಮಿಟೆಡ್ ನಲ್ಲಿ ಪಾಲುದಾರರಾಗಿ ನವೆಂಬರ್ 29ರಿಂದ ಅಧಿಕಾರ ಹಿಡಿದ ಬೆನ್ನಲ್ಲೇ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ನೀಡುವ ಮೂಲಕ ಕಂಪನಿಯಿಂದ ಹೊರಬಂದಿದ್ದಾರೆ.
ಇದೇ ವೇಳೆ ಸುಭಿತಾ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ, ಸೇಂಥಿಲ್ ಸಿನ್ಹಾ ಮತ್ತು ಚೆಂಗಲ್ ವಾರ್ಯನ್ ಅವರನ್ನು ಎನ್ ಡಿಟಿವಿಯ ನಿರ್ದೇಶಕರನ್ನಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy