ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ.
ಬಸಮ್ಮ ಹಾಗೂ ಪ್ರಿಯಕರ ನಾಡಗೌಡ ಕೊಲೆಯಾದವರು. ಮಲ್ಲಣ್ಣ ಕೊಲೆ ಆರೋಪಿ.ಬಸಮ್ಮ ಮತ್ತು ಪ್ರಿಯಕರ ನಾಡಗೌಡ ಹಳ್ಳದ ಮನೆ ನಡುವೆ ಅನೈತಿಕ ಸಂಬಂಧ ಇತ್ತು. ಅವರಿಬ್ಬರೂಹತ್ತಿ ಹೊಲದಲ್ಲಿ ಏಕಾಂತದಲ್ಲಿದ್ದಾಗ ಮಲ್ಲಣ್ಣನ ಕಣ್ಣಿಗೆ ಬಿದ್ದಿದ್ದಾರೆ.
ಇಬ್ಬರನ್ನು ಕಂಡ ಮಲ್ಲಣ್ಣ ಕಲ್ಲು ಎತ್ತಿ ಹಾಕಿದ್ದಾನೆ. ಬಳಿಕ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಾಡಗೌಡನ ಜಮೀನಿನಲ್ಲೇ ಕೃತ್ಯ ನಡೆದಿದ್ದು, ಸ್ಥಳಕ್ಕೆ ಕೆಂಭಾವಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಕೊಲೆ ಆರೋಪಿ ಮಲ್ಲಣ್ಣನನ್ನು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


