ಬಿಡದಿಯ ಮಂಜುನಾಥ್ ಎಂಬವರ ಮೊಬೈಲ್‌ಗೆ 15 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ ಪಾವತಿ ಮಾಡಿ ಎಂದು ಲಿಂಕ್ ಕಳಿಸಿ 7 ಲಕ್ಷ ಹಣವನ್ನು ವಂಚಿಸಿದ್ದಾರೆ.
ಬಿಡದಿ ಪಟ್ಟಣದ ರಾಘವೇಂದ್ರ ಲೇಔಟ್ ನಿವಾಸಿ ಮಂಜುನಾಥ್ ಮೊಬೈಲ್‌ಗೆ ಒಂದು ಎಸ್ಎಂಎಸ್ ಬಂದಿತ್ತು. ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ನಿಮ್ಮ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಆದ್ದರಿಂದ 15 ರೂ.ಗಳನ್ನ ಪಾವತಿ ಮಾಡಿ ಎಂದು ಒಂದು ಲಿಂಕ್ ಬಂದಿತ್ತು.
ಮಂಜುನಾಥ್ ಲಿಂಕ್ ಓಪನ್ ಮಾಡಿ ತಮ್ಮ ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್ ನಂಬರ್, ಪಾನ್ ನಂಬರ್ ನಮೂದಿಸಿ ಸಬ್‌ಮಿಟ್ ಮಾಡಿದ್ದಾರೆ. ತಕ್ಷಣ ಅವರ ಖಾತೆಯ 15 ರೂಪಾಯಿ ಕಡಿತವಾಗಿತ್ತು. ಇದಾದ ನಂತರ ಅವರ ಇ- ಮೇಲ್ ಗೆ ನಿಮ್ಮ ಖಾತೆಗೆ 24 ಲಕ್ಷ ಜಮೆಯಾಗಿರುವುದಾಗಿ ಮೇಲ್ ಬಂದಿದೆ. ಇದ್ದಕ್ಕಿದ್ದಂತೆ ಖಾತೆಗೆ ಹಣ ಜಮೆಯಾಗಿದ್ದನ್ನು ಕಂಡು ಮಂಜುನಾಥ್ ಗಾಬರಿಗೊಂಡಿದ್ದಾರೆ.
ಇದಾದ ಕೆಲ ಸಮಯದಲ್ಲೆ. ಮೇಲ್‌ಗೆ ಬಂದ ಮೆಸೇಜ್ ಓಪನ್ ಮಾಡಿದಾಗ 7 ಲಕ್ಷ ಖಾತೆಯಿಂದ ವರ್ಗಾವಣೆ ಆಗಿತ್ತು. ತಕ್ಷಣ ಮಂಜುನಾಥ್ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ತಮ್ಮ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ರಾಮನಗರದ ಸೈಬರ್ ಪೋಲಿಸ್ ಠಾಣೆಯಲ್ಲಿ ತಮಗೆ ವಂಚಿಸಿದ ವಂಚಕರ ವಿರುದ್ಧ ದೂರು ದಾಖಲಿಸಿದ್ದಾರೆ. ತಮಗಾದ 7 ಲಕ್ಷ ರೂಪಾಯಿ ವಂಚನೆಗೆ ಪೂನಾದ ಐಸಿಐಸಿಐ ಬ್ಯಾಂಕ್‌ನವರೇ ನೇರ ಕಾರಣ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


