- ಆಂಟೋನಿ ಬೇಗೂರು
ಡಿಸೆಂಬರ್ 3 ರಂದು ಅಂಗವೈಕಲ್ಯ ಹೊಂದಿರುವ ಜನರ ಅಂತರರಾಷ್ಟ್ರೀಯ ದಿನವು 1992 ರಿಂದ ಯುನೈಟೆಡ್ ನೇಷನ್ಸ್‌ನಿಂದ ಉತ್ತೇಜಿಸಲ್ಪಟ್ಟ ಅಂತರರಾಷ್ಟ್ರೀಯ ಆಚರಣೆಯಾಗಿದೆ.
ವಿಕಲಾಂಗ ವ್ಯಕ್ತಿಗಳು, “ವಿಶ್ವದ ಅತಿ ದೊಡ್ಡ ಅಲ್ಪಸಂಖ್ಯಾತರು”, ಸಾಮಾನ್ಯವಾಗಿ ಕಳಪೆ ಆರೋಗ್ಯ, ಕಡಿಮೆ ಶಿಕ್ಷಣ ಸಾಧನೆಗಳು, ಕಡಿಮೆ ಆರ್ಥಿಕ ಅವಕಾಶಗಳು ಮತ್ತು ವಿಕಲಾಂಗರಿಗಿಂತ ಹೆಚ್ಚಿನ ಬಡತನವನ್ನು ಹೊಂದಿರುತ್ತಾರೆ.ದೈನಂದಿನ ಜೀವನದಲ್ಲಿ ಅವರು ಎದುರಿಸುತ್ತಿರುವ ಅನೇಕ ಅಡೆತಡೆಗಳು. ಈ ಅಡೆತಡೆಗಳು ಭೌತಿಕ ಪರಿಸರಕ್ಕೆ ಸಂಬಂಧಿಸಿದಂತಹವುಗಳನ್ನು ಒಳಗೊಂಡಂತೆ ವಿವಿಧ ರೂಪಗಳನ್ನು ತೆಗೆದುಕೊಳ್ಳಬಹುದು, ಅಥವಾ ಶಾಸನ ಅಥವಾ ನೀತಿಯಿಂದ ಅಥವಾ ಸಾಮಾಜಿಕ ವರ್ತನೆಗಳು ಅಥವಾ ತಾರತಮ್ಯದಿಂದ ಉಂಟಾಗುತ್ತದೆ.
ಕಡೆಗಣಿಸುವಿಕೆ, ತಾರತಮ್ಯ, ದುರ್ಬಲತೆ ಮತ್ತು ಶೋಷಣೆಯು ಅನೇಕ ಜನರಿಗೆ ಪ್ರತಿದಿನದ ಅಂಶಗಳಾಗಿದ್ದರೆ, ದಿನನಿತ್ಯದ ಆರೋಗ್ಯ ರಕ್ಷಣೆ ಮತ್ತು ಪುನರ್ವಸತಿ ಸೇವೆಗಳಿಗೆ ಕಡಿಮೆ ಪ್ರವೇಶ, ಹೆಚ್ಚು ಸ್ಪಷ್ಟವಾದ ಸಾಮಾಜಿಕ ಪ್ರತ್ಯೇಕತೆ, ಕಳಪೆ ರೀತಿಯಲ್ಲಿ ಸಾರ್ವಜನಿಕ ಆರೋಗ್ಯ ಸಂದೇಶ ಕಳುಹಿಸುವಿಕೆ, ಅಸಮರ್ಪಕವಾಗಿ ನಿರ್ಮಿಸಲಾದ ಕಳಪೆ ಫಲಿತಾಂಶಗಳ ಅಪಾಯವನ್ನು ಹೆಚ್ಚಿಸಲಾಗಿದೆ.
ದೈಹಿಕ ದುರ್ಬಲತೆ ಸಂವೇದನಾ ದುರ್ಬಲತೆ, ಅರಿವಿನ ದುರ್ಬಲತೆ, ಮಾನಸಿಕ ಅಸ್ವಸ್ಥತೆ ಮತ್ತು ವಿವಿಧ ರೀತಿಯ ದೀರ್ಘಕಾಲದ ಕಾಯಿಲೆಗಳನ್ನು ಒಳಗೊಂಡಂತೆ ಅಂಗವಿಕಲರಾಗಿರುತ್ತಾರೆ.
ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ. ಅದುವೇ ಡಿಸೆಂಬರ್ 3. ಇದು ಜಗತ್ತಿನೆಲ್ಲೆಡೆ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರತಿಯೊಬ್ಬ ಅಂಗವಿಕಲರ ಸಮಸ್ಸೆಗಳನ್ನು ಅರಿತು ಅವರಿಗೆ ಬೇಕಾದ ಸಹಾಯ, ಅವಕಾಶ, ಭರವಸೆ, ಶಿಕ್ಷಣ, ಉದ್ಯೋಗ, ಸಮಾನತೆ, ಗೌರವ ಕೊಡುವಂತೆ ಸರ್ಕಾರ ನೋಡಿಕೊಳ್ಳಬೇಕು, ಅವರಿಗೆ ಸರ್ಕಾರದಿಂದ ಮಾಸಶನ 2000 ರೂಪಾಯಿಗಳನ್ನು ನೀಡಬೇಕು, ಉಚಿತ ಚಿಕಿತ್ಸೆ, ಉಚಿತ ಸಾರಿಗೆ ವ್ಯವಸ್ಥೆ, ಉಚಿತ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಅವರನ್ನು ಕಡೆಗಣಿಸದೆ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು.
ಅಂಕವಿಕಲರಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳು ಅವರು ಪಡುವ ಕಷ್ಟ ಹೇಳತೀರದು,ಅಂಥವರಿಗೆ ಏನ್ ಮಾಡಬೇಕು? ಯಾವೆಲ್ಲ ಕಷ್ಟ ಅನುಭವಿಸುತ್ತಿದ್ದಾರೆ ಒಮ್ಮೆ ಆಲೋಚಿಸಿ.
ಒಬ್ಬ ಅಂಗವಿಕಲ ಅವನು ಅಥವಾ ಅವಳು ಸಾಯುವವರೆಗೂ ಇನ್ನೊಬ್ಬರನ್ನು ಅವಲಂಬಿಸಿ ಬದುಕಬೇಕು. ಚಿಕ್ಕ ಮಕ್ಕಳಿಂದ ವಯಸ್ಸು ಆಗುವವರಿಗೂ ಅವರಿಗೆ ಎಲ್ಲಾ ಕಡೆಯಿಂದ ಅವಮಾನ, ಅವಕಾಶವಂಚಿತರಗುತ್ತಾರೆ.
ಅವರನ್ನು ಹೀಯಾಳಿಸುವುದು ಅವರಿಗೆ ತಂದೆ ತಾಯಿ ಇಟ್ಟ ಹೆಸರು ಕರೆಯದೆ ಉದಾಹರಣೆಗೆ ಕುಂಟ, ಕುರುಡ, ಮೂಕ, ಹುಚ್ಚ, ಕಿವುಡ ಅಂತ ಉಪನಾಮದಿಂದ ಕರೆಯೋದು ಎಲ್ಲಾ ಕಡೆ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಸರ್ಕಾರ ಏನು ಮಾಡಲು ಸಾಧ್ಯವಿಲ್ಲ ಆದರೆ ನಮ್ಮ ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ಈ ರೀತಿ ಕರೆಯೋದು ತಪ್ಪು ಅಂತ ಹೇಳಿ ಬೇರೆಯವರಿಗೂ ಸಹ ಹೇಳಿಕೊಡಬೇಕು ಅನ್ನುವದು ನನ್ನ ಅನಿಸಿಕೆ.
ಸಮಾಜದಲ್ಲಿ ಎಲ್ಲಾ ಸರಿ ಇರುವ ವ್ಯಕ್ತಿಗಳನ್ನು ಹೀಯಾಳಿಸಿ ಹಿಂದೆ ಮಾತನಾಡುವ ಜನ ಇರುವಾಗ ಇನ್ನು ಅಂಗವಿಕಲರನ್ನು ಬಿಡುವರೇ?
ಅಂಗವಿಕಲ ಮಕ್ಕಳು ಎಷ್ಟು ಕಷ್ಟ ಅನುಭವಿಸುತ್ತಾರೆ ತಂದೆ ತಾಯಿ ಇರುವವರು ಒಂದು ರೀತಿಯಲ್ಲಿ ಪುಣ್ಯ ಮಾಡಿರುತ್ತಾರೆ ಅವರು ಇರೋವರೆಗೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆಮೇಲೆ ಪ್ರಶ್ನೆ? ಅಂಗವಿಕಲ ಆಶ್ರಮದಲ್ಲಿ ಇರೋ ನಾನಾ ತರದ ಅಂಗವಿಕಲರು ಕೊನೆವರೆಗೂ ಬೇರೆಯವರ ಮೇಲೆ ಅವಲಂಬಿತ ಊಟಕ್ಕೆ ಕಷ್ಟ ಇರುತ್ತೆ, ಆದರೆ ದೈಹಿಕ ಶಕ್ತಿ ಇಲ್ಲದೆ ಇರಬಹುದು ಆದರೆ ಮಾನಸಿಕವಾಗಿ ತುಂಬಾ ಗಟ್ಟಿ ಇರುತ್ತಾರೆ ಅಂಗವಿಕಲರು.
ಶಾಲೆಗಳಲ್ಲಿ ಅಂಗವಿಕಲ ಮಕ್ಕಳಿಗೆ ವಿಶೇಷವಾಗಿ ವಿದ್ಯಾಭ್ಯಾಸ ನೀಡಬೇಕು, ಬೇರೆ ಮಕ್ಕಳ ಜೊತೆ ಸಹಜವಾಗಿ ಸಮಾನವಾಗಿ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಶಿಕ್ಷಕರು ಅವಕಾಶ ಮಾಡಿ ಅವರನ್ನು ಪ್ರೋತ್ಸಾಹಿಸಬೇಕು.
ಉಳಿದ ವಿದ್ಯಾರ್ಥಿಗಳಿಗೆ ಅಂಗವಿಕಲರ ಬಗ್ಗೆ ಅವರು ಪಡುವ ಕಷ್ಟಗಳ ಬಗ್ಗೆ ತಿಳಿಸಿಕೊಡಬೇಕು. ಆಗ ಮಾತ್ರ ನಮ್ಮ ಜೊತೆ ನಿಲ್ಲುತ್ತಾರೆ ಎಂಬ ನಂಬಿಕೆ ವಿಶ್ವಾಸ ಬರುತ್ತದೆ.
ಇನ್ನು ಆ ಅಂಗವಿಕಲ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಹೋಗುವ ಪ್ರತಿಯೊಂದು ಕಂಪನಿ ಅಥವಾ ಅವರ ವಿದ್ಯಾಭ್ಯಾಸಕ್ಕೆ ಸರಿಹೊಂದುವಂತಹ ಕೆಲಸಕ್ಕೆ ಹೋದಾಗ ದಯವಿಟ್ಟು ಕೆಲಸ ನೀಡುವವರು ಅವರ ವಿದ್ಯಭ್ಯಾಸ ಹಾಗೂ ಜ್ಞಾನವನ್ನು ನೋಡಿ. ಅವರು ಹೇಗಿದ್ದಾರೆ? ಯಾವ ರೀತಿ ಬರುತ್ತಿದ್ದಾರೆ? ಬಟ್ಟೆ ಯಾವ ರೀತಿ ಹಾಕುತ್ತಾರೆ? ಇವರಿಂದ ಈ ಕೆಲಸ ಆಗುತ್ತದ? ಇನ್ನೂ ಹಲವಾರು ರೀತಿಯಲ್ಲಿ ಅವರಿಗೆ ಅವಮಾನ ಮಾಡಬೇಡಿ, ಒಮ್ಮೆ ಅವಕಾಶ ಕೊಟ್ಟು ನೋಡಿ. ಅವರು ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗ ಬಹಳ ಮುಖ್ಯ. ಇನ್ನಾದರೂ ಸರ್ಕಾರ ಅಂಗವಿಕಲರಿಗೆ ಸ್ಕೀಮುಗಳನ್ನು ಮಾಡುವ ಬದಲು ಅದು ಎಷ್ಟು ಜನಕ್ಕೆ ಹೋಗಿ ಸೇರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಸಮಾಜದಲ್ಲಿ ಅಂಗವಿಕಲರ ಮೇಲೆ ಅನುಕಂಪ ತೋರದೆ ಅವಕಾಶಕೊಟ್ಟು ಭರವಸೆಯಿಂದ ಈ ಸಮಾಜದಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಸಮಾನತೆಯಿಂದ ಕಾಣಬೇಕು ಇದೇ ನನ್ನ ಆಶಯ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


