ತುರುವೇಕೆರೆ: ಪಕ್ಷದಲ್ಲಿ ದಲಿತರಿಗೆ ಸಲತ್ತುಗಳನ್ನು ಕೊಡಲು ಹಾಲಿ ಶಾಸಕರು ತಾರತಮ್ಯ ಮಾಡಿದ್ದಾರೆ ಅದರಿಂದ ಬೇಸತ್ತು ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಅವರನ್ನು ಮುಂದೆ ಗೌರವಯುತವಾಗಿ ನೋಡಿಕೊಳ್ಳುತ್ತೇನೆ ಎಂದು ಮಾಜಿ ಶಾಸಕ ಕೃಷ್ಣಪ್ಪ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಜೆಡಿಎಸ್ ಗೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿಯಲ್ಲಿ ಮಾಜಿ ಜಿಲ್ಲಾ ಘಟಕದ ಎಸ್ ಸಿ ಮೋರ್ಚಾದ ಪದಾಧಿಕಾರಿಯಾಗಿದ್ದ ಜುಂಜಪ್ಪ ಸ್ವಾಮಿ ಅವರು 25 ಜನ ದಲಿತ ಮುಖಂಡರ ಜೊತೆ ಬಿಜೆಪಿಯನ್ನು ಬಿಟ್ಟು ಜೆಡಿಎಸ್ ಸೇರುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ದಲಿತರಿಗೆ ಸವಲತ್ತುಗಳನ್ನು ಕೊಡಲು ಹಾಲಿ ಶಾಸಕರು ತಾರತಮ್ಯ ಮಾಡಿದ್ದಾರೆ ಅದರಿಂದ ಬೇಸತ್ತು ಬಿಜೆಪಿ ಬಿಟ್ಟು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ನಾನು ಶಾಸಕನಾಗಿದ್ದ ಕಾಲದಲ್ಲಿ 285 ಬೋರ್ವೆಲ್ ಗಳನ್ನು ಒಂದೇ ಬಾರಿಗೆ ಅನುಮೋದನೆ ಪಡೆದುಕೊಂಡು ಬಂದಿದ್ದೆ. ಬಹಳಷ್ಟು ಬೋರ್ವೆಲ್ ಗಳನ್ನು ಕೇಳುವವರೇ ಇರಲಿಲ್ಲ. ಒಬ್ಬರಿಗೆ ಎರಡೆರಡು ಬೋರ್ವೆಲ್ ಗಳನ್ನು ಕೊರೆಸಿಕೊಟ್ಟಿದ್ದೇನೆ ಎಂದರು.
ದಲಿತ ಮುಖಂಡ ಜುಂಜಪ್ಪಸ್ವಾಮಿ ಮಾತನಾಡಿ, ತಾಲೂಕಿನ ಹಲವಾರು ಮಂದಿ ದಲಿತ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಮಾಜಿ ಶಾಸಕ ಕೃಷ್ಣಪ್ಪನವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಸೇರುತ್ತಿದ್ದೇವೆ ಎಂದು ತಿಳಿಸಿದರು .
ಅವರಲ್ಲಿ ನಟರಾಜು, ನವೀನ್, ಹರೀಶ್ ,ಮಂಜುನಾಥ, ಜಯಣ್ಣ, ಅರಕೆರೆ ನವೀನ್, ಸಾಸಲು ಭುವನೇಶ್, ಹೆಗ್ಗೆರೆ ಲಕ್ಷ್ಮಿಕಾಂತ, ರಂಗಣ್ಣ ,ಮಂಜುನಾಥ, ಸೋಮಲಾಪುರಗಂಗಾಧರ್, ಹಡವನಹಳ್ಳಿ ಮಂಜುನಾಥ್, ರಾಘವೇಂದ್ರ, ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಮುಖಂಡರಾದ ಬಾಣಸಂದ್ರ ರಮೇಶ್, ವೆಂಕಟಾಪುರ ಯೋಗೀಶ್, ಗ್ರಾ.ಪಂ ಸದಸ್ಯ ಚನ್ನಬಸವೇಗೌಡ, ದಲಿತ ಮುಖಂಡ ರಂಗಸ್ವಾಮಿ, ಶಿವು, ಬಸವರಾಜು ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz