nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ತಾಯಿ: ವೈ.ಡಿ.ರಾಜಣ್ಣ 

    November 14, 2025

    ಏಕತಾ ನಡಿಗೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ!

    November 14, 2025

    ಹೊಸದಾಗಿ 30 ಕೊಳವೆ ಬಾವಿ ಕೊರೆಸಲು ಜಿ.ಪಂ. ಸಿಇಒ ಜಿ.ಪ್ರಭು ಅನುಮೋದನೆ

    November 14, 2025
    Facebook Twitter Instagram
    ಟ್ರೆಂಡಿಂಗ್
    • ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ತಾಯಿ: ವೈ.ಡಿ.ರಾಜಣ್ಣ 
    • ಏಕತಾ ನಡಿಗೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ!
    • ಹೊಸದಾಗಿ 30 ಕೊಳವೆ ಬಾವಿ ಕೊರೆಸಲು ಜಿ.ಪಂ. ಸಿಇಒ ಜಿ.ಪ್ರಭು ಅನುಮೋದನೆ
    • ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ
    • ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸದಿದ್ದರೆ ಹೋರಾಟ: ಭಾರತೀಯ ಕಿಸಾನ್‌ ಸಂಘ
    • ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ: ಪತ್ತೆಯಾಗದ ಹುಲಿಯ ಗುರುತು!
    • ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ
    • ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಂಚರತ್ನ ರಥಯಾತ್ರೆಗೆ ಕೊರಟಗೆರೆಯಲ್ಲಿ ಭರ್ಜರಿ ರೆಸ್ಪಾನ್ಸ್!
    ಕೊರಟಗೆರೆ December 5, 2022

    ಪಂಚರತ್ನ ರಥಯಾತ್ರೆಗೆ ಕೊರಟಗೆರೆಯಲ್ಲಿ ಭರ್ಜರಿ ರೆಸ್ಪಾನ್ಸ್!

    By adminDecember 5, 2022No Comments3 Mins Read
    jds

    ಕೊರಟಗೆರೆ: ಪಂಚರತ್ನ ಯೋಜನೆಯಿಂದ ಕರ್ನಾಟಕ ರಾಜ್ಯದ ಅಭಿವೃದ್ದಿ ಸಾಧ್ಯ. ಗ್ರಾಮೀಣ ಜನತೆಯ ಆರ್ಥಿಕ ಸದೃಢತೆಗೆ ಶಿಕ್ಷಣ, ವಸತಿ, ಆರೋಗ್ಯ, ರೈತ ಚೈತನ್ಯ ಮತ್ತು ಯುವ ನವಮಾರ್ಗ, ಮಹಿಳಾ ಸಬಲೀಕರಣ ಅಗತ್ಯ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸ್ತ್ರೀ ಶಕ್ತಿ ಸಂಘದ ಸಾಲದಿಂದ ಋಣಮುಕ್ತ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

    ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ, ಹೊಳವನಹಳ್ಳಿ, ಕೋಳಾಲ, ಕಸಬಾ, ತೋವಿನಕೆರೆ ಮತ್ತು ಕೊರಟಗೆರೆ ಪಟ್ಟಣದಲ್ಲಿ ಜಾತ್ಯಾತೀತ ಜನತಾ ದಳ ಪಕ್ಷದಿಂದ ಶನಿವಾರ ಏರ್ಪಡಿಸಲಾಗಿದ್ದ ಪಂಚರತ್ನ ರಥಯಾತ್ರೆ ಸಂಚಾರದ ವೇಳೆ ಮಾತನಾಡಿದರು.


    Provided by
    Provided by

    ಗುಣಮಟ್ಟದ ಶಿಕ್ಷಣವೇ ಆಧುನಿಕ ಶಕ್ತಿ, ಬಡವರಿಗೆ ವಸತಿಯ ಆಸರೆ, ಪ್ರತಿ ಗ್ರಾ.ಪಂ.ಗೆ ಹೈಟೆಕ್ ಆಸ್ಪತ್ರೆ, ಆಧುನಿಕ ತಂತ್ರಜ್ಞಾನದ ಕೃಷಿ ಚೈತನ್ಯ, ಯುವ ಜನತೆಗೆ ನವಮಾರ್ಗ ಮತ್ತು ಮಹಿಳೆಯರಿಗೆ ಉದ್ಯೋಗಕ್ಕಾಗಿ ಜೆಡಿಎಸ್ ಪಕ್ಷವು ಪಂಚರತ್ನ ಯೋಜನೆ ರೂಪಿಸಿದೆ. ರಾಜ್ಯ ಸರಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ, ಕಾರ್ಯಕ್ರಮದ ಹೆಸರಿನಲ್ಲಿ ಜನರ ಹಣವು ಲೂಟಿ ಆಗುತ್ತಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೇ ಬಡವರ ಕಲ್ಯಾಣವೇ ನನ್ನ ಗುರಿ ಎಂದರು.

    ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ನವ ಕರ್ನಾಟಕ ನಿರ್ಮಾಣಕ್ಕಾಗಿ ಕುಮಾರಣ್ಣ ಪಂಚರತ್ನ ಯೋಜನೆ ರೂಪಿಸಿ ಸ್ತ್ರೀ ಶಕ್ತಿ ಸಂಘದ ಸಾಲಮನ್ನಾ ಮಾಡುವ ಭರವಸೆ ನೀಡಿದ್ದಾರೆ.ಕುಮಾರಣ್ಣ ನೀಡಿರುವ ರೈತಪರ ಯೋಜನೆಯೇ ನನಗೇ ಶ್ರೀರಕ್ಷೆ ಆಗಲಿದೆ. ಪಂಚರತ್ನ ರಥಯಾತ್ರೆ ವೇಳೆ ಕೊರಟಗೆರೆ ಕ್ಷೇತ್ರದ ರೈತಾಪಿವರ್ಗ ಮತ್ತು ಕಾರ್ಯಕರ್ತರು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ ಆಗಿದ್ದೇನೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜೀನಪ್ಪ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್ ಯುವ ಅಧ್ಯಕ್ಷ ,ವೆಂಕಟೇಶ್, ಜಿಪಂ ಸದಸ್ಯರಾದ ಶಿವರಾಮಯ್ಯ, ಮಾಜಿ ತಾಪಂ ಸದಸ್ಯ ಪ್ರಕಾಶ್, ಮುಖಂಡರಾದ ಕಾಮರಾಜು, ಸಿದ್ದಮಲ್ಲಪ್ಪ, ಮಂಜುನಾಥ, ನಾಗರಾಜು, ಕಾಂತರಾಜು, ರಮೇಶ್, ಶಶಿಕುಮಾರ್, ಪಾರುಕ್, ಅಮರ್ ಸೇರಿದಂತೆ ಇತರರು ಇದ್ದರು.

    ಪಂಚರತ್ನ ರಥಯಾತ್ರೆ ಸಂಚಾರದ ವೇಳೆ ಶಾಲೆಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲ, ಕೊಠಡಿಗಳು ಸೋರುತ್ತೀವೆ ಎಂದ ಮಕ್ಕಳು. ನನಗೇ ಒಂದು ಕಾಲು ಇಲ್ಲ, ಕೃತಕ ಕಾಲಿನಲ್ಲಿ ಓಡಾಡುತ್ತಿದ್ದೇನೆ. ಒಂದು ಬೈಕ್ ಕೊಡಿಸಿ ಎಂದು ವಿಶೇಷ ಚೇತನ. ಹತ್ತಾರು ಕಡೆಗಳಲ್ಲಿ ಸೇತುವೆ ದುರಸ್ಥಿ ಮತ್ತು ರಸ್ತೆಗಳು ಕಡಿತವಾಗಿವೆ ಎಂದು ತೀತಾ ಜನರ ಅಳಲು. ಶಾಲೆಗೆ ಬರಲು ಕರಡಿ ಕಾಟವಿದೆ ಎಂದು ಕುಮಾರಸ್ವಾಮಿ ಮುಂದೆ ಕಣ್ಣೀರಿಟ್ಟ ಪುರವಾರದ ವಿದ್ಯಾರ್ಥಿನಿ. ಹೀಗೆ ನೂರಾರು ಜನರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಮಾಜಿ ಸಿಎಂ ಮುಂದೆ ತೋಡಿಕೊಂಡರು.

    ರೈತರಿಂದ ಅದ್ದೂರಿ ಸ್ವಾಗತ..

    ಪುರವಾರ ಗ್ರಾಮದ ರೈತರಿಂದ ಕಡಲೆಕಾಯಿ ಹಾರ, ಬೈರೇನಹಳ್ಳಿಯ ಕಾರ್ಯಕರ್ತರಿಂದ ಸೇಬಿನ ಹಾರ, ಹೊಳವನಹಳ್ಳಿಯ ರೈತರಿಂದ ಅಡಿಕೆಯ ಹಾರ, ಕೊರಟಗೆರೆ ಪಟ್ಟಣದ ಕಾರ್ಯಕರ್ತರಿಂದ ಉದ್ದಿನಹೊಡೆ, ಲಿಂಬೆಹಣ್ಣು ಹಾರ, ಜಿ.ನಾಗೇನಹಳ್ಳಿಯ ಸ್ಥಳೀಯರಿಂದ ತುಳಸಿ ಪತ್ರೆಯ ಹಾರ, ಮತ್ತು ಕೆಸ್ತೂರು -ತೋವಿನಕೆರೆ ಮುಖಂಡರಿಂದ ಮುಸುಕಿನ ಜೋಳ ಮತ್ತು ಸೇಬಿನ ಹಾರ ಹಾಕುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಕೊರಟಗೆರೆ ಕ್ಷೇತ್ರದ ಸಾವಿರಾರು ರೈತರು ಅದ್ದೂರಿ ಸ್ವಾಗತ ಕೋರಿದರು.

    ಜಿಪಂ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ:

    ಕೊರಟಗೆರೆ ಕ್ಷೇತ್ರದ ಪುರವಾರ, ಹೊಳವನಹಳ್ಳಿ, ಕೋಳಾಲ, ಕಸಬಾ, ತೋವಿನಕೆರೆ ಮತ್ತು ಕೆಸ್ತೂರು ಕ್ಷೇತ್ರಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸುಧಾಕರಲಾಲ್ ಅಬ್ಬರ ಪ್ರಚಾರ ನಡೆಸಿದರು. ಪಂಚರತ್ನ ಯೋಜನೆಯ ಪ್ರಚಾರದ ವಾಹನ ಮತ್ತು ಸಾವಿರಾರು ಜೆಡಿಎಸ್ ಕಾರ್ಯಕರ್ತರು ದ್ವಿಚಕ್ರ ವಾಹನಗಳ ಮೂಲಕ ೫೦ಕ್ಕೂ ಅಧಿಕ ಗ್ರಾಮಗಳಲ್ಲಿ ಸಂಚರಿಸಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಬಗ್ಗೆ ಪ್ರಚಾರ ನಡೆಸಿದರು.

    ಪಂಚರತ್ನ ಯೋಜನೆಯಿಂದ ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ಸಾಧ್ಯ. ನಿಮ್ಮೆಲ್ಲರ ಪ್ರೀತಿ-ಹಾರೈಕೆ ಸದಾ ರೈತ ನಾಯಕ ಕುಮಾರಣ್ಣನ ಮೇಲಿರಲಿ.  ನಾನು ೨೫ ವರ್ಷದಿಂದ ಕೊರಟಗೆರೆ ಕ್ಷೇತ್ರದ ಜನತೆಯ ಸೇವೆ ಮಾಡಿದ್ದೇನೆ. ನಾನು ನಿಮ್ಮ ಕೊರಟಗೆರೆ ಕ್ಷೇತ್ರದ ಮನೆಯ ಮಗ. 2023ಕ್ಕೆ ಮತ್ತೆ ಜಯಗಳಿಸಿ ಕೊರಟಗೆರೆ ಕ್ಷೇತ್ರದ ಬಡಜನರ ಸೇವೆ ಮಾಡುತ್ತೇನೆ..

    –ಪಿ.ಆರ್.ಸುಧಾಕರಲಾಲ್. ಮಾಜಿ ಶಾಸಕ

     

    ಜೆಡಿಎಸ್ ಭದ್ರಕೋಟೆ ಕೊರಟಗೆರೆ ಕ್ಷೇತ್ರದಲ್ಲಿ ಸುಧಾಕರಲಾಲ್ ಗೆಲುವು ಖಚಿತ. ೨೦೧೩ಕ್ಕಿಂತ 2018ರಲ್ಲಿ ಹೆಚ್ಚು ಮತ ಪಡೆದು ಸೋತಿದ್ದಾರೆ. ಆದರೆ ಅದು ಸೋಲಲ್ಲ. ಸುಧಾಕರಲಾಲ್‌ಗೆಕೊರಟಗೆರೆ ಬಡಜನರ ಆರ್ಶಿವಾದ ಇದೆಅವರು 2023ಕ್ಕೆ ಗೆದ್ದು ಬರ್ತಾರೆ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ಮತ್ತು ಬಡವರ ಕಲ್ಯಾಣಕ್ಕಾಗಿ ಲಾಲ್‌ ಗೆ ನಿಮ್ಮೆಲ್ಲರ ಆರ್ಶಿವಾದ ಅಗತ್ಯ.

    –ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ..

     

     ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷರಾಗಿ ಅಮೃತ ಮಂಜುನಾಥ್ ಅವಿರೋಧ ಆಯ್ಕೆ

    November 14, 2025

    ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ

    November 12, 2025

    ಕಣ್ಣಿನ ಉಚಿತ ತಪಾಸಣಾ ಶಿಬಿರ:  ಸರಿಯಾದ ಸಮಯಕ್ಕೆ ಕಣ್ಣು ತಪಾಸಣೆ ಅಗತ್ಯ: ಮುರುಳಿಧರ ಹಾಲಪ್ಪ

    November 12, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ತಾಯಿ: ವೈ.ಡಿ.ರಾಜಣ್ಣ 

    November 14, 2025

    ಸರಗೂರು:  ಕನ್ನಡ ನಮ್ಮ ನಾಡಿನ ಹೆಮ್ಮೆಯ ಭಾಷೆ ಈ ಭಾಷೆ ಹಲವಾರು ಭಾಷೆಗಳಿಗೆ ತಾಯಿಯಾಗಿದೆ ಎಂದು ಪಶು ಸಂಗೋಪನಾ ಇಲಾಖೆ…

    ಏಕತಾ ನಡಿಗೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ!

    November 14, 2025

    ಹೊಸದಾಗಿ 30 ಕೊಳವೆ ಬಾವಿ ಕೊರೆಸಲು ಜಿ.ಪಂ. ಸಿಇಒ ಜಿ.ಪ್ರಭು ಅನುಮೋದನೆ

    November 14, 2025

    ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ

    November 14, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.