ಬೆಂಗಳೂರಿನ ವಿದ್ಯಾರ್ಥಿ ಭವನ ಯಾರಿಗೆ ಗೊತ್ತಿಲ್ಲ. ಸುಮಾರು ಎಂಟು ದಶಕಗಳಷ್ಟು ಹಳೆಯ ಬೆಂಗಳೂರಿನ ಈ ಹೊಟೆಲ್ ಬೆಂಗಳೂರು ಮಾತ್ರವಲ್ಲದೇ, ಇಡೀ ದೇಶ ಹಾಗೂ ವಿದೇಶಗಳಲ್ಲಿಯೂ ಪ್ರಖ್ಯಾತಿಯನ್ನು ಗಳಿಸಿದೆ. ಅದರಲ್ಲಿಯೂ ವಿದ್ಯಾರ್ಥಿ ಭವನದ ಮಸಾಲೆ ದೋಸೆಗೆ ಮಾರು ಹೋಗುವವರೇ ಇಲ್ಲ ಎನ್ನಬಹುದು.
ಅನೇಕ ಗಣ್ಯರು ಆಗಾಗ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಉಪಹಾರ ಸೇವಿಸುವುದು ಸಾಮಾನ್ಯವಾಗಿದೆ. ಬೆಂಗಳೂರು ಮೂಲದ ಅನಿವಾಸಿ ಭಾರತೀಯರು ಬೆಂಗಳೂರಿಗೆ ಬಂದಾಗಿ ಇಲ್ಲಿಗೆ ಬರದೇ ಇರುವುದಿಲ್ಲ.
ಬ್ರಿಟಿಷ್ ಡೆಪ್ಯೂಟಿ ಹೈ ಕಮೀಷನರ್ ಚಂದ್ರ ಅಯ್ಯರ್ ಅವರು ಬೆಂಗಳೂರಿನಲ್ಲಿ ಒಂದು ವಾರದ ಕಾಲ ತಂಗಿದ್ದರು. ಶನಿವಾರದಂದು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ರುಚಿಯಾದ ಮಸಾಲೆ ದೋಸೆ, ಕಾಫಿ ಸವಿದರು. ವಿದ್ಯಾರ್ಥಿ ಭವನದ ಅರುಣ್ ಅಡಿಗ ಅವರು ಅಯ್ಯರ್ ಹಾಗೂ ರಾಜಕೀಯ ಆರ್ಥಿಕ ಸಲಹಾಗಾರರಾದ ಮಂಜುನಾಥ್ ಕೆ.ಎಸ್ ಅವರನ್ನು ಉಪಚರಿಸಿದರು. ಜೊತೆಗೆ ಹೋಟೆಲ್ ಚರಿತ್ರೆ ಹಾಗೂ ಖಾದ್ಯದ ವಿಶೇಷತೆಗಳ ಕುರಿತು ವಿವರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy