ತುರುವೇಕೆರೆ: ಪಟ್ಟಣದಲ್ಲಿ ತಾಲೂಕು ಕಚೇರಿ ಮುಂಭಾಗ ಕೊಬ್ಬರಿಗೆ ಇಪ್ಪತ್ತು ಸಾವಿರ ನಿಗದಿ ಬೆಲೆಗೆ ಒತ್ತಾಯಿಸಿ ತೆಂಗು ಮತ್ತು ಬೆಳೆಗಾರರ ಸಂಘದ ಅಧ್ಯಕ್ಷರಾದ ಎನ್.ಆರ್.ಜಯರಾಮ್ ಗ್ರೇಡ್ 2 ತಹಶೀಲ್ದಾರ್ ಗೆ ಮನವಿ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ಜಯರಾಮ್, ಕೊಬ್ಬರಿ ಬೆಲೆ ಜನವರಿ ತಿಂಗಳಲ್ಲಿ ಕ್ವಿಂಟಾಲ್ ಗೆ 18ರಿಂದ 19 ಸಾವಿರದ ಆಸು ಪಾಸಿನಲ್ಲಿತ್ತು. ನಂತರದ ತಿಂಗಳುಗಳಲ್ಲಿ ಹಂತ ಹಂತವಾಗಿ ಇಳಿದು 11 ಸಾವಿರಕ್ಕೆ ಬಂದು ನಿಂತಿದೆ. ತೆಂಗಿನ ಮರಗಳಲ್ಲಿ ಹೊಂಬಾಳೆ ಹೊಡೆದು ಎಳೆನೀರು, ತೆಂಗಿನಕಾಯಿ ಕಿತ್ತು ಕೊಬ್ಬರಿ ಮಾಡುವ ಒಟ್ಟಿಗೆ ಎರಡು ವರ್ಷ ಕಾಲಾವಕಾಶ ಬೇಕಾಗುತ್ತದೆ.ಈ ಕಾರಣಕ್ಕಾಗಿ ರೈತರಿಗೆ ವರ್ಷಕ್ಕೆ 13 ರಿಂದ 14,000 ಖರ್ಚನ್ನು ಮಾಡುತ್ತಾರೆ ಇದರಿಂದ ಲಾಭಕ್ಕಿಂತ ಅಸಲು ಹೆಚ್ಚಾಗುತ್ತದೆ ಎಂದರು.
ಸರ್ಕಾರ ಕೂಡಲೇ ರೈತ ಬೆಳೆದ ಕೊಬ್ಬರಿಯ ಖರೀದಿಯನ್ನು ನಪೆಡ್ ಮೂಲಕ ಖರೀದಿಸಿ, ಪ್ರತಿ ಕ್ವಿಂಟಾಲ್ ಗೆ 20,000 ನಿಗದಿತ ಬೆಲೆಯನ್ನು ನೀಡಬೇಕು. ಇಲ್ಲದಿದ್ದಲ್ಲಿ ತಾಲೂಕಿನ ಎಲ್ಲಾ ರೈತ ಸಂಘಟನೆಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ವಿವಿಧ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿ ಎಂಕಾಂತರಾಜ್, ಉಪಾಧ್ಯಕ್ಷರಾದ ಹಟ್ಟಿಹಳ್ಳಿ ಪುಟ್ಟೇಗೌಡ., ಸಹಕಾರಿದರ್ಶಿ ರೇವಣ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪ್ರಹ್ಲಾದ್ ,ಸೇರಿದಂತೆ ಹಲವು ಮುಖಂಡರುಗಳು ರೈತರು ಸೇರಿ ಗ್ರೇಡ್ 2 ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಯನ್ನು ಪತ್ರ ಸಲ್ಲಿಸಿದರು.
ವರದಿ: ಸುರೇಶ್ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy