ಮ್ಯಾಂಡಸ್ ಚಂಡಮಾರುತದಿಂದಾಗಿ ಚಳಿ ಹೆಚ್ಚಾಗಿದ್ದು, ಇದರಿಂದ ಮಕ್ಕಳಲ್ಲಿ ಜ್ವರ, ಉಸಿರಾಟ ಸಮಸ್ಯೆ, ವೈರಲ್ ಬ್ರಾಂಕೋ ನ್ಯೂಮೋನಿಯಾ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ದಿಢೀರ್ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ನಿರಂತರ ಜ್ವರ, ಕೆಮ್ಮು, ನೆಗಡಿ, ಪ್ರಜ್ಞೆ ಕಳೆದುಕೊಳ್ಳುವುದು ಸೇರಿದಂತೆ ಮಕ್ಕಳು ಆಹಾರವನ್ನು ಸರಿಯಾಗಿ ಸೇವನೆ ಮಾಡದೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 40% ಹೆಚ್ಚಿದೆ.
ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅಪಾಯ ಖಂಡಿತ. ಸಾಧ್ಯವಾದಷ್ಟು ಬಿಸಿ ನೀರು ಕುಡಿಯೋದಕ್ಕೆ ಕೊಡಿ, ಮಳೆಯಲಿ ನೆನೆಯಲು ಬಿಡಬೇಡಿ, ಕೋಲ್ಡ್ ಅಥವಾ ತಣ್ಣನೆಯ ಪದಾರ್ಥ ಕೊಡಬೇಡಿ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz