ತುರುವೇಕೆರೆ: ತಾಲೂಕಿನ ಸೂಳೆಕೆರೆ ಗ್ರಾಮ ಮತ್ತು ಸೂಳೆಕೆರೆ ಪಾಳ್ಯ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಸದಸ್ಯರು ಇಂದು ಗ್ರಾಮದಲ್ಲಿರುವ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ಹೆಚ್ಚುವರಿ ಷೇರು ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದರು.
ಮಹಿಳಾ ಮುಖ್ಯ ಪ್ರವರ್ತಕರಾದ ರಾಧಮ್ಮ ಎಂ.ಆರ್. ಲೋಕೇಶ್ ಈ ಸಂದರ್ಭದಲ್ಲಿ ಮಾತನಾಡಿ, ಸೂಳೆಕೆರೆ ಮತ್ತು ಸೂಳೆಕೆರೆ ಪಾಳ್ಯದ ಈ ಮಹಿಳಾ ಹಾಲು ಉತ್ಪಾದಕರ ಸಂಘದ ಶೇರುದಾರರು ಇಲ್ಲಿಯವರೆಗೂ 160 ಜನ ಷೇರುದಾರರಿದ್ದು, ಇನ್ನೂ ನಮ್ಮ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರುದಾರರಾಗಿ ಈ ಹಾಲು ಒಕ್ಕೂಟ ಆರಂಭಿಸಲು ಸಹಕಾರಿಯಾಗಬೇಕು ಎಂದು ತಿಳಿಸಿದರು.
ಶೇರುದಾರರಾದ ಮಹಾಲಕ್ಷ್ಮಿ ರುದ್ರೇಶ್ ಮಾತನಾಡಿ , ಸೂಳೆಕೆರೆ ಗ್ರಾಮದಲ್ಲಿ ಈ ಹಾಲು ಉತ್ಪಾದಕರ ಸಂಘ ಅಧಿಕೃತವಾಗಿ ಪ್ರಾರಂಭವಾಗಿರುವುದು ನಮ್ಮೆಲ್ಲರಿಗೂ ಖುಷಿ ತಂದಿರುವ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳೆಯರು ಈ ಹಾಲು ಉತ್ಪಾದಕರ ಸಂಘಕ್ಕೆ ಶೇರುದಾರರಾಗಿ ಈ ಒಕ್ಕೂಟ ಪ್ರಾರಂಭಿಸಲು ಸಹಕಾರಿಯಾಗಬೇಕು. ನಮ್ಮ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಮಹಾಲಿಂಗಯ್ಯ ಅವರು ಈ ಹಾಲು ಒಕ್ಕೂಟವನ್ನು ಪ್ರಾರಂಭಿಸಲು ನಮ್ಮೆಲ್ಲರ ಬೆನ್ನೆಲುಬಾಗಿ ನಿಂತು ಸಹಕಾರಿಯಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘದ ಎಲ್ಲಾ ಷೇರುದಾರರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz