ತುರುವೇಕೆರೆ: ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜಗದಾಂಬ ಶಂಕರಪ್ಪ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧಿಕಾರದಲ್ಲಿದ್ದ ಮಮತಾರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ನಾಮಪತ್ರ ಸಲ್ಲಿಸುವ ವೇಳೆ ಲೋಕಮ್ಮನಹಳ್ಳಿ ಕ್ಷೇತ್ರದ ಜಗದಾಂಬ ಶಂಕರಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ತೇಜಸ್ವಿನಿ ರವರು ಜಗದಾಂಬ ಶಂಕರಪ್ಪ ರವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಯೂನಿಯನ್ ಬ್ಯಾಂಕ್ ನ ನಿರ್ದೇಶಕ ಮಾವಿನಹಳ್ಳಿ ವಿಜಯ್ ಕುಮಾರ್, ಟಿಎಪಿಎಂಎಸ್ ನ ಮಾಜಿ ಅಧ್ಯಕ್ಷ ಕೋಳಗಟ್ಟ ಶಿವಾನಂದ್, ಪಟ್ಟಣ ಪಂಚಾಯಿತಿಯ ಅಧ್ಯಕ್ಷ ರಾಮೇಗೌಡ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೇ ರತ್ನಮ್ಮ ಸದಸ್ಯರಾದ ಎಲ್ ಎ ಗಂಗಾಧರಯ್ಯ, ನಾಗರತ್ನಮ್ಮ ಜಿ, ಮಂಜುನಾಥ್, ಶೋಭಾ,ಲಕ್ಷ್ಮಣ್ ಕುಮಾರ್, ಪುಟ್ಟ ಲಕ್ಷ್ಮಮ್ಮ, ನಳಿನ ಜೆ, ಅಲ್ಲಪ್ಪ ಆರ್, ಮಂಜುಳಾ ರಂಗಯ್ಯ, ಛಾಯಾ ಎ.ಬಿ., ಮುಖಂಡರುಗಳಾದ ಶಿವಕುಮಾರ್, ಜಗದೀಶ್,ಬಾಣಸಂದ್ರ ಪ್ರಕಾಶ್, ತಾವರೆಕೆರೆ ಕೃಷ್ಣಮೂರ್ತಿ,ಮಹಾಲಿಂಗಪ್ಪ ಓಂಕಾರ್ ಮೂರ್ತಿ, ರೇಣುಕಾ, ರಂಗಸ್ವಾಮಿ ಮುಂತಾದವರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz