ಮಾಜಿ ಸಚಿವ ಜನಾರ್ದನರೆಡ್ಡಿ ನಮ್ಮ ಜೊತೆಯಲ್ಲೇ ಇರ್ತಾರೆ. ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಇಂದು ಈ ಕುರಿತು ಮಾಧ್ಯಮದವರೊಡನೆ ಮಾತಾಡಿದ ಬಿಎಸ್ ಯಡಿಯೂರಪ್ಪ, ಜನಾರ್ಧನ ರೆಡ್ಡಿ ಅವರ ಪರ ಬ್ಯಾಟ್ ಬೀಸಿದರು. ಜನಾರ್ಧನ ರೆಡ್ಡಿ ಪಕ್ಷವನ್ನು ಬಿಟ್ಟು ಎಲ್ಲೂ ಹೋಗಲ್ಲ, ಅವರು ಗಂಗಾವತಿಯಲ್ಲಿ ಮನೆಕಟ್ಟಿದ್ದಾರೆ ಅಂದಮಾತ್ರಕ್ಕೆ ಹೊಸಪಕ್ಷ ಕಟ್ಟುತ್ತಾರೆ ಅಂತ ಅರ್ಥ ಕಲ್ಪಿಸಬಾರದು. ರೆಡ್ಡಿಯವರು ಪಕ್ಷದಲ್ಲಿರುವುದು ಎಷ್ಟು ಮಹತ್ವ ಅನ್ನೋದನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುತ್ತೇನೆ, ರಾಜ್ಯದಲ್ಲಿ ಪಕ್ಷದ ಸಂಘಟನೆಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಎಲ್ಲಾ ಕೇಸ್ ಇತ್ಯರ್ಥಪಡಿಸಿಕೊಂಡು ಬಿಜೆಪಿಗೆ ರೆಡ್ಡಿ ಮರಳುತ್ತಾರೆ. ರೆಡ್ಡಿ ಅವರ ಜೊತೆ ಮಾತನಾಡಿದ್ದೇನೆ ಎಂದರು.
ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದಿದ್ದೇನೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ಬಿಎಸ್ ವೈ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy