ರಾಷ್ಟ್ರ ರಾಜಧಾನಿ ದೆಹಲಿ ಕ್ರೈಂ ಹಾಟ್ ಸ್ಪಾಟ್ ಆಗುತ್ತಿದೆ. ಗುರುವಾರ ರಾತ್ರಿ ಅಮನ್ ವಿಹಾರ್ ಪ್ರದೇಶದಲ್ಲಿ ಗೀತಾ ಎಂಬ 55 ವರ್ಷದ ಮಹಿಳೆಯನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಆರೋಪಿಗಳ ಪೈಕಿ ಓರ್ವ ಮನೆ ಮುಂದೆ ನಿಂತರೆ ಮತ್ತೊಬ್ಬರು ರಸ್ತೆಯಲ್ಲಿ ಕಾವಲು ಕಾಯುತ್ತಿದ್ದ. ಮನೆಯ ಬಾಗಿಲು ತೆರೆದ ಮಹಿಳೆಯ ಮೇಲೆ ಬಾಗಿಲ ಬಳಿ ನಿಂತಿದ್ದ ವ್ಯಕ್ತಿ ಗುಂಡು ಹಾರಿಸಿದ್ದಾನೆ.
ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಮೃತರ ಮಗ ಒಂದು ವರ್ಷದ ಹಿಂದೆ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದು, ಇದನ್ನು ಇಷ್ಟಪಡದ ಮಹಿಳೆಯ ಸಂಬಂಧಿಕರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz