250 ವರ್ಷಗಳ ಇಂಡೋನೇಷ್ಯಾದ ಪಫುವಾದಲ್ಲಿನ ದೂರದ ಹಳ್ಳಿಯನ್ನು ಆಳಿದ ಬುಡಕಟ್ಟು ಸಮುದಾಯದ ಮುಖ್ಯಸ್ಥ ಅಗಾತ್ ಮಾಮೆಟೆ ಮಾಬೆಲ್ ಅವರ ಮೃತದೇಹವನ್ನು ಇಂದಿಗೂ ಸಂರಕ್ಷಿಸಲಾಗಿದೆ.
ಪ್ರಸ್ತುತ ಬುಡಕಟ್ಟು ಸಮುದಾಯದ ಮುಖ್ಯಸ್ಥರಾಗಿರುವ ಎಲಿ ಮಾಬೆಲ್ ಅವರು ತಮ್ಮ ಪೂರ್ವಜರಾಗಿರುವ ಅಗಾತ್ ಮಾಮೆಟೆ ಮಾಬೆಲ್ ಅವರ ಮೃತದೇಹವನ್ನು ಸಂರಕ್ಷಿಸುತ್ತಿದ್ದಾರೆ.
ಈ ಬುಡಕಟ್ಟು ಸಮುದಾಯದಲ್ಲಿ ವೀರರು ಹಾಗೂ ಸಮುದಾಯದ ಪ್ರಮುಖ ಹಿರಿಯರು ಮೃತಪಟ್ಟರೆ ಅವರ ಮೃತದೇಹವನ್ನು ಸಂರಕ್ಷಿಸಿಡುವ ಸಂಪ್ರದಾಯವಿದೆ. ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ರೀತಿಯ ಆಚರಣೆಯನ್ನು ಮಾಡಲಾಗುತ್ತದೆ.
ಹಿರಿಯರ ಮೃತದೇಹವನ್ನು ಹೊಗೆ ಮತ್ತು ಪ್ರಾಣಿಗಳ ಕೊಬ್ಬು ಸವರಿ ಕೊಳೆತು ಹೋಗದಂತೆ ರಕ್ಷಿಸಲಾಗುತ್ತದೆ. ಆ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕಾರ್ಯವನ್ನು ಇವರು ಮಾಡುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz