ತಿರುವನಂತಪುರಂ: ಕೇರಳದ ವ್ಯಕ್ತಿಯೋರ್ವ ತನ್ನ ಅಪ್ರಾಪ್ತ ವಯಸ್ಸಿನ ಪ್ರೇಯಸಿಯನ್ನು ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ವರ್ಕಲದ ಬಳಿಯ ವಡೆಸ್ಸೆರಿಕೋಣಂ ನಲ್ಲಿ ನಡೆದಿದೆ.
17 ವರ್ಷದ ಸಂಗೀತಾ ಮೃತ ದುರ್ದೈವಿಯಾಗಿದ್ದಾಳೆ. ಗೋಪು ಎಂಬ ಭಗ್ನ ಪ್ರೇಮಿ ಈ ಕೃತ್ಯ ನಡೆಸಿದ್ದು, ಪ್ರೇಯಸಿ ತನಗೆ ದ್ರೋಹ ಬಗೆಯುತ್ತಿದ್ದಾಳೆ ಎಂದು ಭಾವಿಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸಂಗೀತಾಳನ್ನು ತನ್ನ ಮನೆಯಿಂದ ಹೊರಗೆ ಕರೆದ ವ್ಯಕ್ತಿ, ಆಕೆ ಬಂದೊಡನೆ ಚಾಕು ತೆಗೆದುಕೊಂಡು ಕತ್ತು ಸೀಳಿದ್ದಾನೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಯುವತಿ ತಕ್ಷಣವೇ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ, ಆಕೆಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಮಾರ್ಗ ಮಧ್ಯೆಯೇ ಯುವತಿ ಮೃತಪಟ್ಟಿದ್ದಳು.
ಸಂಗೀತಳನ್ನು ಪರೀಕ್ಷಿಸಲು ಗೋಪು ಬೇರೊಂದು ಮೊಬೈಲ್ ನಿಂದ ಬೇರೊಬ್ಬ ಯುವಕನ ರೀತಿಯಲ್ಲಿ ಮಾತನಾಡತೊಡಗಿದ್ದು, ಇದನ್ನರಿಯದ ಸಂಗೀತ ಹೊಸ ಹುಡುಗನೊಂದಿಗೆ ನಿರಂತರವಾಗಿ ಮಾತನಾಡಲು ಪ್ರಾರಂಭಿಸಿದ್ದಳು. ಮತ್ತೋರ್ವನಂತೆ ನಟಿಸುತ್ತಿದ್ದ ಗೋಪು ಆಕೆಯನ್ನು ಮನೆಯಿಂದ ಹೊರಗೆ ಕರೆದು ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


