ತುರುವೇಕೆರೆ : ಪಟ್ಟಣದ ಗುರುಭವನದ ಆವರಣದಲ್ಲಿ ಜನವರಿ 2ರ ಸೋಮವಾರ ಆದಿ ಜಾಂಬವ ಸಮ್ಮೇಳನ ಮತ್ತು ಎಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ
ಈ ಸಮ್ಮೇಳನಕ್ಕೆ ಆಗಮಿಸುವಂತೆ ಆದಿ ಜಾಂಬವ ಸಮಾಜದ ಅಧ್ಯಕ್ಷರು ಆದ ವಿ ಟಿ ವೆಂಕಟರಾಮಯ್ಯನವರು (ವಿಠಲ ದೇವರಹಳ್ಳಿ,) ಮಾಧ್ಯಮದ ಮೂಲಕ ಮನವಿ ಮಾಡಿದರು.
ಜೊತೆಗೆ ಈ ಸಮಾವೇಶಕ್ಕೆ ಕೇಂದ್ರದ ಮಂತ್ರಿಗಳು, ರಾಜ್ಯದ ಮಂತ್ರಿಗಳು, ಹೋರಾಟಗಾರರು, ಸಾಹಿತಿಗಳು, ಸ್ವಾಮೀಜಿಗಳು, ಆಗಮಿಸಲಿದ್ದು, ಸಮ್ಮೇಳನದ ಉದ್ದೇಶ, ಒಳ ಮೀಸಲಾತಿಯ ಎ ಜೆ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಒತ್ತಾಯಿಸುವುದರ ಮೂಲಕ ಈ ಸಮಾವೇಶ ಮಾಡಲು ತೀರ್ಮಾನಿಸಿದೆ ಎಂದರು.
ಜೊತೆಗೆ ಈ ಸಮಾವೇಶದಲ್ಲಿ 10 ರಿಂದ 15 ಸಾವಿರ ಈ ಸಮಾಜದ ಬಂಧುಗಳು ಸೇರುವ ನಿರೀಕ್ಷೆಯಿದ್ದು, ಇವರುಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಇನ್ನು ಈ ಸಮ್ಮೇಳನದಲ್ಲಿ ಈ ಸಮಾಜದ ಎಸ್, ಎಸ್, ಎಲ್, ಸಿ, & ಪಿ ,ಯು, ಸಿ, ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಅಭಿನಂದನ ಕಾರ್ಯಕ್ರಮ ಹಾಗೂ ಕಲಾವಿದರು ಗಳಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ತಮಟೆ, ಕಹಳೆ, ವಾದ್ಯಗೋಷ್ಠಿಯ ಮೂಲಕ ಸ್ವಾಗತಿಸಿ ಈ ಕಾರ್ಯಕ್ರಮವನ್ನು ಆರಂಭ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಹಾಗೂ ಹಾಲಿ ಅಧ್ಯಕ್ಷರು, ಸದಸ್ಯರು, ಜೊತೆಗೆ ಗ್ರಾಮ ಪಂಚಾಯಿತಿ ಹಾಲಿ ಹಾಗೂ ಮಾಜಿ ಸದಸ್ಯರು, ಆದಿ ಜಾಂಬವ ಸಮಾಜದ ಮುಖಂಡರುಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz