ತುರುವೇಕೆರೆ: ಹಾಸನದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ದಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಷನ್ ಕರ್ನಾಟಕ, ಫೆಡರೇಷನ್ ಮತ್ತು ಹಾಸನ ಜಿಲ್ಲಾ ಡಾಡ್ಜ್ವಾಲ್ ಅಸೋಸಿಯೇಷನ್ ಇವರುಗಳ ಸಹಯೋಗದೊಂದಿಗೆ ಡಿ. 27ರಿಂದ 29ರವರೆಗೆ ನಡೆದ ರಾಷ್ಟ್ರಮಟ್ಟದ ಡಾಡ್ಜ್ವಾಲ್ ಪಂದ್ಯಾವಳಿಯಲ್ಲಿ ಎಸ್ ಬಿ ಜಿ ವಿದ್ಯಾಲಯ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
ಪಂದ್ಯಾವಳಿಯಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನವನ್ನು ಮತ್ತು ಸಬ್ ಜೂನಿಯರ್ ಬಾಲಕರ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಈ ತಂಡದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಎಸ್ ಬಿ ಜಿ ವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜುಗಳ ಕಾಲೇಜಿನ ವಿದ್ಯಾರ್ಥಿಗಳಾದ ಮಾನಸ ಜಿ., ವೇದಾವತಿ, ಕುಮುದಾ, ವಿನಯ್, ಆರ್.ಪ್ರಮೋದ್, ಕೇಶವ್ ಈ ಕ್ರೀಡಾಪಟುಗಳು ರಾಜ್ಯಕ್ಕೆ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಮತ್ತು ತುರುವೇಕೆರೆ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.
ಇದರ ಮುಖ್ಯ ತರಬೇತುದಾರರಾದ ಉದಯ್ ಕುಮಾರ್ ಸಿ.ಪಿ. ಹಾಗೂ ಮಕ್ಕಳಿಗೂ ಆದಿಚುಂಚನಗಿರಿ ಶಿಕ್ಷಣ ಆಡಳಿತ ಮಂಡಳಿ ಮತ್ತು ವಿದ್ಯಾಲಯ ಮತ್ತು ಕಾಲೇಜು ಆಡಳಿತ ಮಂಡಳಿ ಆತ್ಮೀಯವಾಗಿ ಅಭಿನಂದಿಸಿದ್ದಾರೆ.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz