ತುರುವೇಕೆರೆ: ಪಟ್ಟಣದ ಹಿರಣ್ಣಯ್ಯ ಬಯಲು ರಂಗಮಂದಿರದ ಆವರಣದಲ್ಲಿ ಜನವರಿ 2ರಂದು ಮಾದಿಗ ಜನಾಂಗದ ಬೃಹತ್ ಸಮ್ಮೇಳನ ಹಾಗೂ ಒಳ ಮೀಸಲಾತಿ ಹೋರಾಟದ ಸಮಾವೇಶವನ್ನು ನಡೆಯಲಿದ್ದು, ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸಮಾವೇಶಕ್ಕೆ ಸುಮಾರು 10 ಸಾವಿರ ಜನ ಭಾಗವಹಿಸಲಿದ್ದು, ಸಮಾವೇಶದಲ್ಲಿ ಸಮಾಜದ ಬಾಂಧವರಿಗೆ ಊಟದ ವ್ಯವಸ್ಥೆ, ನೀರಿನ ವ್ಯವಸ್ಥೆ, ಬೃಹತ್ ವೇದಿಕೆ, ನೆರಳಿಗಾಗಿ ಶಾಮಿಯಾನ ಎಲ್ಲವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ.
ಇದರ ನೇತೃತ್ವ ವಹಿಸಿಕೊಂಡಿರುವ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಟಿ.ಕೆ. ಚಿದಾನಂದ್ ರವರು ಮಾತನಾಡಿ, ಈ ಸಮಾವೇಶಕ್ಕೆ ಮಾದಿಗ ಜನಾಂಗದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನಸಂಖ್ಯೆಯ ಬಲವನ್ನ ಪ್ರದರ್ಶಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy