ಸರಗೂರು: ವಿಕಲಚೇತನ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಲು ಹಾಗೂ ಕೌಶಲ್ಯಯುತರನ್ನಾಗಿಸಲು ಅಂಗವಿಕಲ ಮಕ್ಕಳ ಶಿಶು ಕೇಂದ್ರಿಕೃತ ಶೈಕ್ಷಣಿಕ ಯೋಜನೆ ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಹೇಳಿದರು.
ಸರಗೂರು ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ವಿಕಲಚೇತನರ ಗ್ರಾಮ ಸಭೆಯನ್ನು ಶುಕ್ರವಾರ ಹಮ್ಮಿಕೊಂಡಿದ್ದ ವಿಕಲಚೇತನರ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನರಿಗೆ ಮೀಸಲಿಟ್ಟಿರುವ ಶೇ.5ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಸಲಹೆ ನೀಡಿದರು.
ಡಿಸೆಂಬರ್ನಲ್ಲಿ ತಿಂಗಳಲ್ಲಿ ಅಂಗವಿಕಲರಿಗೆ ಸಮನ್ವಯ ಗ್ರಾಮಸಭೆ ನಡೆಸಬೇಕು. ಗ್ರಾಮ ಪಂಚಾಯಿತಿಗಳ ಅನುದಾನದಲ್ಲಿ ಶೇ 5 ರಷ್ಟು ಮೀಸಲಿಟ್ಟು, ಮಾರ್ಗಸೂಚಿಗಳಂತೆ ಖರ್ಚು ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ–2016 ಹೇಳುತ್ತದೆ ಎಂದು ತಿಳಿಸಿದರು.
ನಂತರ ತಾಲ್ಲೂಕು ಎಂಆರ್ಡಬ್ಲೂಯು ದೇವರಾಜು ಮಾತನಾಡಿ, ಪಂಚಾಯಿತಿ ಹಂತದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ವಿಕಲಚೇತನರ ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಆಹ್ವಾನಿಸಬೇಕು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಭಾಗವಹಿಸಬೇಕು. ಸ್ಥಳೀಯ ಅಂಗವಿಕಲರ ಸಮಸ್ಯೆ ಆಲಿಸಬೇಕು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ಉಪಾಧ್ಯಕ್ಷೆ ಜ್ಯೋತಿ ರಮೇಶ್ ವಿಕಲಚೇತನರ ಕಿಟ್ ಹಾಗೂ ಸಂಜೀವಿನಿ ಸಂಘದ ವತಿಯಿಂದ ಸಸಿಗಳನ್ನು ಸಂಘದ ಕಾರ್ಯಕರ್ತರಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿರಮೇಶ್, ಮಾಜಿ ಅಧ್ಯಕ್ಷೆ ಮತ್ತು ಸದಸ್ಯ ರತ್ನಮ್ಮ ರಾಜೇಶ್, ಮಂಜುಳ ರಾಮಚಂದ್ರ, ಶಿವಕುಮಾರ್, ಗಂಗಾಧರ್, ಶಿವಲಿಂಗಯ್ಯ, ಶಿವರಾಜು ಅರಸು, ಭಾಗ್ಯ ಕೆಂಪಸಿದ್ದ,ಅಭಿವೃದ್ಧಿ ಅಧಿಕಾರಿ ಪುಟ್ಟ ವೀರಯ್ಯ,ವಿಆರ್ಡಬ್ಲೂಯುಗಳಾದ ಸೋಮೇಶ್, ಬಸವರಾಜು, ಮುಖಂಡರು ಪುಟ್ಟಸ್ವಾಮಿ, ಸಂಜೀವಿನಿ ಸಂಘದ ಕಾರ್ಯಕರ್ತರಾದ ಗೌರಿ, ರೇಣುಕಾ, ಇನ್ನೂ ಮುಖಂಡರು ಹಾಗೂ ವಿಕಲಚೇತನರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


